ಹೊಸ ಅಟೋಗಳಿಗೆ ಡಿಜಿಟಲ್ ಮೀಟರ್
ಬೆಂಗಳೂರು,
ಏ. 30 : ರಾಜ್ಯದಲ್ಲಿ ಇನ್ನು ಮುಂದೆ ಬೀದಿಗೀಳಿಯುವ ಎಲ್ಲಾ ಹೊಸ ಅಟೋಗಳಿಗೂ ಡಿಜಿಟಲ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲು ಸರಕಾರ ನಿರ್ಧರಿಸಿದೆ. 15 ದಿನದೊಳಗೆ ಈ ಆದೇಶ ಹೊರಬೀಳಲಿದೆ ಎಂದು ಸಾರಿಗೆ ಸಚಿವ ಆರ್ ಅಶೋಕ್ ಹೇಳಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಹಾಲಿ ಮೀಟರ್ ಗಳ ಬಗ್ಗೆ ಸಾಕಷ್ಟು ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಡಿಜಿಟಲ್ ಮೀಟರ್ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ ಎಂದರು. ಮೀಟರ್ ಗಳಲ್ಲಿನ ದೋಷದಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಹಳೆ ಅಟೋಗಳಿಗೆ ಡಿಜಿಟಲ್ ಮೀಟರ್ ಅಳವಡಿಕೆ ಮಾಡಲು ನೀಡುವ 1000 ರುಪಾಯಿಗಳಿಂದ 1500 ರುಪಾಯಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಬೆಂಗಳೂರು
ನಗರದಲ್ಲಿ ವೋಲ್ವೋ ಬಸ್ ಗಳ ಪ್ರಯಾಣ ದರವನ್ನು ದಿಢೀರ್ ಏರಿಕೆ ಮಾಡಿರುವ ಕ್ರಮವನ್ನು ಸಚಿವ ಅಶೋಕ್ ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರಿನ ಪೂರ್ವ ವಲಯದಲ್ಲಿ ಜಾರಿಯಲ್ಲಿರುವ ಪ್ರಯಾಣ ದರವನ್ನು ಉಳಿದ ವಲಯದಲ್ಲೂ ಜಾರಿಗೆ ತರಲಾಗಿದೆ. ಪೂರ್ವ ವಲಯ ಮೊದಲು ಐಟಿ ವಲಯವಾಗಿತ್ತು. ಎಲ್ಲ ವಲಯಗಳಲ್ಲಿಯೂ ಒಂದೇ ದರ ನಿಗದಿ ಮಾಡಬೇಕು ಎಂಬ ಬೇಡಿಕೆಯಿಂದ ಒಂದು ದರ ಜಾರಿಗೆ ತರಲಾಗಿದೆ ಎಂದು ಅವರು ವಿವರಿಸಿದರು.











Click it and Unblock the Notifications