ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿ ಆಸ್ತಿ ತೆರಿಗೆ ಕಟ್ಟುವ ದಿನಾಂಕ ವಿಸ್ತರಣೆ

By Prasad
|
Google Oneindia Kannada News

Last date for BBMP tax payment date extended
ಬೆಂಗಳೂರು, ಏ. 30 : ಸ್ಥಿರಾಸ್ತಿ ತೆರಿಗೆ ಕಟ್ಟದಿದ್ದ ಬೆಂಗಳೂರ ನಾಗರಿಕರಿಗೆ ಇಲ್ಲೊಂದು ಸಂತಸದ ಸುದ್ದಿಯಿದೆ. 2010-11ನೇ ಸಾಲಿನ ಆಸ್ತಿ ತೆರಿಗೆಯನ್ನು ಶೇ.5ರಷ್ಟು ತೆರಿಗೆ ವಿನಾಯಿತಿ ಪಡೆದು ಕಟ್ಟಲು ಕೊನೆಯ ದಿನವನ್ನು ಒಂದು ತಿಂಗಳು ವಿಸ್ತರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಂಗಳವಾರ ನಿರ್ಣಯ ಕೈಗೊಂಡಿದೆ. ಈ ಮೊದಲು ಏಪ್ರಿಲ್ 30ರೊಳಗೆ ತೆರಿಗೆ ಕಟ್ಟಬೇಕಾಗಿತ್ತು.

ಬೆಂಗಳೂರು ಮೇಯರ್ ಆಯ್ಕೆ ಪ್ರಕ್ರಿಯೆ ಮುಗಿದ ನಂತರ ಇಂದು ಜರುಗಿದ ಪ್ರಥಮ ಕೌನ್ಸಿಲ್ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ತೆರಿಗೆ ಕಟ್ಟಲು ಕೊನೆಯ ದಿನಾಂಕವನ್ನು ಒಂದು ತಿಂಗಳ ಬದಲಿಗೆ ಎರಡು ತಿಂಗಳು ವಿಸ್ತರಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದವು.

ಕುಡಿಯುವ ನೀರಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಭಾರೀ ಕೋಲಾಹಲವೆಬ್ಬಿಸಿದ್ದವು. ಬೇಕೆ ಬೇಕು ನೀರು ಬೇಕು ಎಂಬ ಘೋಷಣೆಯೊಂದಿಗೆ ಸದನದ ಬಾವಿಗೆ ನುಗ್ಗಿದ ಪ್ರತಿಪಕ್ಷಗಳು ಸದನದಲ್ಲಿ ಗದ್ದಲವೆಬ್ಬಿಸಿದವು. ಇದೇ ಸಂದರ್ಭದಲ್ಲಿ ವಿದ್ಯುತ್ ಕೂಡ ಕೈಕೊಟ್ಟಿದ್ದರಿಂದ ಗೊಂದಲ ತಾರಕಕ್ಕೇರಿತ್ತು.

ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿರುವ ವಾರ್ಡಿನಲ್ಲೇ ನೀರಿನ ಕೊರತೆ ಎದುರಾಗಿದೆ. ತಮ್ಮ ಕ್ಷೇತ್ರದಲ್ಲಿ ಕೂಡಲೆ ನೀರಿನ ಹಾಹಾಕಾರ ತಗ್ಗಿಸಬೇಕು ಎಂದು ಕಾಂಗ್ರೆಸ್ ಸದಸ್ಯರು ಪಟ್ಟುಹಿಡಿದಿದ್ದರು.

ಇಂಟರ್ನೆಟ್ ವ್ಯವಸ್ಥೆ ಇರುವವರು ಆಸ್ತಿ ತೆರಿಗೆಯನ್ನು ಆನ್ ಲೈನ್ ಮುಖಾಂತರ ಪಾವತಿಸಲು ಬಿಬಿಎಂಪಿ ಅನುವು ಮಾಡಿಕೊಟ್ಟಿದೆ. ಕ್ರೆಡಿಟ್ ಕಾರ್ಡ್ (ವಿಸಾ ಅಥವಾ ಮಾಸ್ಟರ್ ಕಾರ್ಡ್) ಬಳಸಿ ಆಸ್ತಿ ತೆರಿಗೆಯನ್ನು ಕಟ್ಟಿದರೆ ಯಾವುದೇ ಸೇವಾ ಶುಲ್ಕ ತೆರಬೇಕಾಗಿಲ್ಲ. ಆನ್ ಲೈನ್ ಕಿಟಕಿ ಇಲ್ಲಿದೆ : http://sasbbmp.com/

ಹೆಚ್ಚಿನ ವಿವರಣೆಗೆ ಈಮೇಲ್ ಮಾಡಿ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X