ಸಚಿನ್ ಮ್ಯಾಂಗೋ ಇದೆ ಬೇಕಾ ಸಾರ್

A mango breed named after sachin tendulkar
ಮುಂಬೈ, ಏ.30: ಚಿಣ್ಣರ ಅಚ್ಚುಮೆಚ್ಚಿನ, ಅಭಿಮಾನಿಗಳ ಆರಾಧ್ಯ ದೈವ, ಜೀವಂತ ದಂತ ಕಥೆ ಸಚಿನ್ ರಮೇಶ್ ತೆಂಡೂಲ್ಕರ್ ಕೀರ್ತಿ ಕಲಶಕ್ಕೆ ಹೊಚ್ಚ ಹೊಸ ಫಲ ಸೇರ್ಪಡೆಯಾಗಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರ ಹೆಸರನ್ನು ಅಮರಗೊಳಿಸುವ ನಿಟ್ಟಿನಲ್ಲಿ ಮಾವು ಬೆಳೆ ತಜ್ಞರೊಬ್ಬರು ತುಂಬಾ ವಿರಳವಾದ ಆದರೆ ವಿಶಿಷ್ಟವಾದ ಮಾವಿನ ತಳಿಯೊಂದಕ್ಕೆ ಸಚಿನ್ ಹೆಸರಿಟ್ಟಿದ್ದಾರೆ.

ಇಡೀ ವಿಶ್ವದಲ್ಲಿ ಸಚಿನ್ ರಂತೆ ಮತ್ತ್ತೊಬ್ಬ ಆಟಗಾರನಿಲ್ಲ.ಸಚಿನ್ ಗೆ ಸಚಿನ್ ಅಷ್ಟೇ ಸಾಟಿ. ಅವರ ಹೆಸರು ಅಚ್ಚಳಿಯದೆ ಉಳಿದು, ಇನ್ನಷ್ಟು ಜನಪ್ರಿಯವಾಗಲಿ ಎಂಬ ಉದ್ದೇಶದಿಂದ ಮಾವಿನ ತಳಿಗೆ ಸಚಿನ್ ಹೆಸರು ಇಟ್ಟಿದ್ದೇನೆ .ಇದಾದ ನಂತರ ಮುಂದೆ ಸಚಿನ್ ರ ಆರಾಧ್ಯದೈವ, ಭಾರತದ ಕೋಗಿಲೆ ಲತಾ ಮಂಗೇಷ್ಕರ್ ಅವರ ಹೆಸರನ್ನು ಮಾವು ಹಣ್ಣಿಗೆ ಇಡುತ್ತೇನೆ ಎನ್ನುತ್ತಾರೆ ಮಾವಿನ ಬೆಳೆಗಾರ ಹಾಗೂ ತಜ್ಞರಾದ ಕಲಿಮುಲ್ಲಾ ಖಾನ್

ಸಚಿನ್ ಮ್ಯಾಂಗೋ ಹೈಬ್ರೀಡ್ ತಳಿಯಾಗಿದೆ. ರಸಭರಿತ ಗೂದರ್ ಷಾ ಹಾಗೂ ಚೌಸಾ ತಳಿಗಳಿಗೆ ಸಚಿನ್ ಹೆಸರು ಇಡಲಾಗಿದೆ. ಕುತೂಹಲಕಾರಿ ವಿಷಯ ಎಂದರೆ, ಸುಮಾರು 300 ಕ್ಕೂ ಹೆಚ್ಚು ಹಣ್ಣುಗಳಿದ್ದರೂ ಒಂದನ್ನು ಮಾರಾಟ ಮಾಡುವುದಿಲ್ಲವಂತೆ. ಸಚಿನ್ ಗೆ ಬೆಲೆ ಕಟ್ಟೋಕೆ ಸಾಧ್ಯವೇ? ಹಾಗೆ ಈ ಹಣ್ಣುಗಳಿಗೂ ಬೆಲೆ ಕಟ್ಟಿ ಮಾರುವುದಿಲ್ಲ. ಎಲ್ಲಾ ಹಣ್ಣುಗಳನ್ನು ಸಚಿನ್ ಗೆ ಪ್ರೀತಿಯಿಂದ ಉಡುಗೊರೆ ರೂಪದಲ್ಲಿ ಕಳಿಸುತ್ತೇನೆ.

ಅವರ ಕುಟುಂಬದವರು , ಮಕ್ಕಳು ಅದನ್ನು ತಿಂದು ಆನಂದಿಸಲಿ ಎಂದು ಖಾನ್ ಹೇಳುತ್ತಾರೆ. ಹಣ್ಣುಗಳ ರಾಜ ಮಾವಿಗೆ ಕ್ರಿಕೆಟ್ ಕ್ಷೇತ್ರದ ರಾಜನ ಹೆಸರು ಒಪ್ಪುವಂತದ್ದೇ ಆದರೆ, ಕೈಗೆ ಸಿಕ್ಕ ಹಣ್ಣು ಬಾಯಿಗೆ ಇಲ್ಲ ಎಂಬಂತೆ, ಎಲ್ಲಾ ಸಚಿನ್ ಗೆ ಹೊಟ್ಟೆಗೆ ಸೇರುತ್ತಿದೆಯಲ್ಲಾ . ಖಾನ್ ಸಾಹೇಬ್ರೆ .. ಸಚಿನ್ ಹೆಸರು ಹೇಳಿ ನಾವು ನಾಲ್ಕು ಹಣ್ಣು ತಿನ್ನುತ್ತೀವಿ ಕೊಡಿ ಎನ್ನುತ್ತಾರೆ ಆಮ್ರಫಲಾಪೇಕ್ಷಿಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+