ದೇಶದ ಐಟಿ ವೆಚ್ಚದಲ್ಲಿ ಭಾರೀ ಹೆಚ್ಚಳ
ನವದೆಹಲಿ,
ಏ. 28 : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ಹೊರದೇಶಗಳಿಂದ ಬಂಡವಾಳ ಕೂಡ ಅದೇ ರೀತಿ ಹರಿದು ಬರುತ್ತಿದೆ. ಈ ಕಾರಣದಿಂದ ಉದ್ಯಮದಲ್ಲಿ ಪ್ರಸಕ್ತ ವರ್ಷ ವೆಚ್ಚ ಶೇ.14ರಷ್ಟು ಹೆಚ್ಚಳ ಆಗಲಿದೆ ಎಂದು ಸಂಶೋಧನಾ ಸಂಸ್ಥೆ ಗಾರ್ಟ್‌ನರ್ ತಿಳಿಸಿದೆ. id="toptextpromo">ದೇಶದಲ್ಲಿ
ರಿಟೇಲ್, ಉಪಯುಕ್ತ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳು ಮಾಡುವ ವೆಚ್ಚ 67 ಬಿಲಿಯನ್ ಡಾಲರ್ ಗಳಿಗೇರಲಿದೆ. ದೇಶದ ಮಾಹಿತಿ ತಂತ್ರಜ್ಞಾನ ಮಾರುಕಟ್ಟೆ ಕಂಪ್ಯೂಟರ್ ಹಾರ್ಡ್ ವೇರ್, ತಂತ್ರಜ್ಞಾನ ಆಧಾರಿತ ಸೇವೆಗಳು ಮತ್ತು ಟೆಲಿಕಾಮ್ ಸೇವೆಗಳನ್ನು ಒಳಗೊಂಡಿದ್ದು ಇದು 2013ಕ್ಕೆ 89 ಬಿಲಿಯನ್ ಡಾಲರ್ ಗಳಿಗೆ ತಲುಪಲಿದೆ ಎಂದು ಅಂದಾಜು ಮಾಡಲಾಗಿದೆ. id='are-slot-1' class='oiad oi-axt oiadv'> id='top-searched-articles'>ಗ್ರಾಹಕರು
ಮಾಹಿತಿ ತಂತ್ರಜ್ಞಾನ ಸೇವೆಯ ಸರಳತೆ ಹಾಗೂ ಅನುಕೂಲಗಳನ್ನು ಮನಗಂಡಿರುವದರಿಂದ ಹೆಚ್ಚು ವ್ಯಯ ಮಾಡಲಾಗುತ್ತಿದೆ. ಕಂಪ್ಯೂಟರುಗಳು ದೇಶದ ಮೂಲೆಮೂಲೆ ತಲುಪಿದ್ದರಿಂದ ಜನ ಮಾಹಿತಿ ತಂತ್ರಜ್ಞಾನಕ್ಕೆ ಮಾರುಹೋಗಿದ್ದಾರೆ. ಇದರೊಂದಿಗೆ ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಕೂಡ ಹಣ ಹೂಡಲು ಪೈಪೋಟಿಗೆ ಬಿದ್ದಿವೆ. ದೇಶದ ಟಿಸಿಎಸ್ ಮತ್ತು ಇನ್ಫೋಸಿಸ್ ಸೇರಿದಂತೆ ಇವುಗಳ ಪ್ರತಿಸ್ಪರ್ಧಿ ಬಹುರಾಷ್ಟ್ರೀಯ ಕಂಪೆನಿಗಳಾದ ಐಬಿಎಮ್ ಮತ್ತು ಎಕ್ಸೆಂಚರ್ ಕೂಡ ಭಾರತದಲ್ಲಿ ತಮ್ಮ ಹೂಡಿಕೆಗಳನ್ನು ಹೆಚ್ಚಿಸುತ್ತಿವೆ ಎಂದು ಸಂಸ್ಥೆ ಹೇಳಿದೆ.











Click it and Unblock the Notifications