ಭಾರ್ತಿ ಏರ್ ಟೆಲ್ ನಿವ್ವಳ ಲಾಭ ಶೇ.8 ಕುಸಿತ

ಕಳೆದ ಮಾರ್ಚ್ ನಲ್ಲಿ ಭಾರ್ತಿ ಆಫ್ರಿಕಾದ 15 ದೇಶಗಳಲ್ಲಿರುವ ಝೈನ್ ಟೆಲಿಕಾಂನ ಆಸ್ತಿಗಳನ್ನು 9 ಬಿಲಿಯನ್ ಡಾಲರ್ ಗಳಿಗೆ ಖರೀದಿಸಿದ್ದು ವಿಶ್ವದ 5ನೇ ಅತಿ ದೊಡ್ಡ ಮೊಬೈಲ್ ಕಂಪೆನಿಯಾಗಿ ಹೊರಹೊಮ್ಮಿದೆ. ಭಾರತ ದಲ್ಲಿ ಪ್ರತೀ ತಿಂಗಳು 16 ಮಿಲಿಯನ್ ಗ್ರಾಹಕರು ಮೊಬೈಲ್ ಸಂಪರ್ಕ ಪಡೆದುಕೊಳ್ಳುತ್ತಿದ್ದು, ಕಳೆದ ಮಾರ್ಚ್ ನಲ್ಲಿ ಈ ಸಂಖ್ಯೆ 20 ಮಿಲಿಯನ್ ಗೆ ಏರಿಕೆಯಾಗಿದೆ.
ಎರಡು ಹೊಸ ಕಂಪೆನಿಗಳೂ ಮಾರುಕಟ್ಟೆ ಪ್ರವೇಶಿಸಿರುವುದರಿಂದ ದೇಶದ ಒಟ್ಟು ಮೊಬೈಲ್ ಸೇವಾ ಕಂಪೆನಿಗಳ ಸಂಖ್ಯೆ 15 ಕ್ಕೇರಿದೆ. ಆದರೆ ಪ್ರತೀ ಸೆಕೆಂಡ್ ಕರೆ ದರ ಹಾಗೂ ತೀವ್ರ ಪೈಪೋಟಿಯಿಂದ ಕಂಪೆನಿಗಳ ಆದಾಯ ತೀವ್ರ ಕುಸಿದಿದೆ ಎನ್ನಲಾಗಿದೆ. ಭಾರ್ತಿ ಅಧ್ಯಕ್ಷ ಸುನಿಲ್ ಮಿತ್ತಲ್ ಅವರು ಭಾರ್ತಿಯ ಮಾರುಕಟ್ಟೆ ತುಂಬಾ ಉತ್ತಮವಾಗಿದ್ದು ಮುಂದಿನ ವರ್ಷ ಹೆಚ್ಚಿನ ಬೆಳವಣಿಗೆ ದಾಖಲಿಸಲಿದೆ ಎಂದು ಹೇಳಿದ್ದಾರೆ.
ದೆಹಲಿ ಮೂಲದ ಭಾರ್ತಿ ಯಲ್ಲಿ ಏಷ್ಯಾದ ಪ್ರಮುಖ ಮೊಬೈಲ್ ಕಂಪೆನಿ ಸಿಂಗ್ ಟೆಲ್ ಶೇ.32 ಪಾಲು ಹೊಂದಿದೆ. ಭಾರ್ತಿ ಪ್ರಸ್ತುತ 128 ಮಿಲಿಯ ಮೊಬೈಲ್ ಗ್ರಾಹಕರನ್ನು ಹೊಂದಿದ್ದು ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಶೇ.22 ಪಾಲು ಹೊಂದಿದೆ.
ನೆರೆಯ ಶ್ರೀಲಂಕಾ ಮತ್ತು ಬಾಂಗ್ಲಾ ದೇಶದಲ್ಲಿ ಕೂಡ ವಹಿವಾಟು ನಡೆಸುತ್ತಿರುವ ಭಾರ್ತಿ ಕಳೆದ ತ್ರೈಮಾಸಿಕದಲ್ಲಿ 8.8 ಮಿಲಿಯ ಗ್ರಾಹಕರನ್ನು ಪಡೆದಿತ್ತು. ಪ್ರತೀ ಮೊಬೈಲ್ ಬಳಕೆದಾರರಿಂದ ಕಂಪೆನಿಗೆ ಬರುತಿದ್ದ ಸರಾಸರಿ ವಾರ್ಷಿಕ ಆದಾಯ ದಲ್ಲಿ ಶೇ.28 ರಷ್ಟು ಕುಸಿತ ದಾಖಲಾಗಿದ್ದು ರು.220 ಕ್ಕೆ ಇಳಿದಿದೆ. ಗ್ರಾಹಕರ ಮೊಬೈಲ್ ಬಳಕೆಯ ಸರಾಸರಿ ಅವಧಿ ಕೂಡ ಶೇ.4 ರಷ್ಟು ಕಡಿಮೆಯಾಗಿದ್ದು 468 ನಿಮಿಷಗಳಿಗೆ ಇಳಿದಿದೆ.












Click it and Unblock the Notifications