ಹಿರಿಯ ನಾಗರಿಕರಿಗೆ ಇಲ್ಲೊಂದು ಸಿಹಿ ಸುದ್ದಿ
ಬೆಂಗಳೂರು,
ಏ.28: 60 ವರ್ಷ ಮೇಲ್ಪಟ್ಟ ನಾಗರಿಕರಿಗಾಗಿ ಮೇ.10 ರಿಂದ ಮೇ.25 ರವರೆಗೆ ನಾರಾಯಣ ಹೃದಯಾಲಯದಲ್ಲಿ ಸೀನಿಯರ್ ಸಿಟಿಜನ್ ಕ್ಲಬ್ ವತಿಯಿಂದ ರಿಯಾಯಿತಿ ದರದಲ್ಲಿ ಆರೋಗ್ಯ ತಪಾಸಣೆ ಏರ್ಪಡಿಸಲಾಗಿದೆ. ನಗರದ ಮೂರು ಕೇಂದ್ರಗಳಲ್ಲಿ ತಪಾಸಣೆ ನಡೆಯಲಿದೆ. id="toptextpromo">ಸಾಮಾನ್ಯ
ದೈಹಿಕ ಪರೀಕ್ಷೆ, ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆ ನಡೆಸಲಾಗುತ್ತದೆ. ವೃದ್ಧರು ಮಾನಸಿಕ ಖಿನ್ನತೆಯಿಂದ ಹೊರಬರಬೇಕು. ಹಿರಿಯ ನಾಗರಿಕರಿಗೆ ಅನೇಕ ಸೌಲಭ್ಯಗಳು ಲಭ್ಯವಿದ್ದರೂ, ಅಗತ್ಯ ಮಾಹಿತಿಯ ಕೊರತೆ ಎದುರಾಗಿದೆ. ಆದ್ದರಿಂದ ಜನರಿಗೆ ಈ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ನಮ್ಮ ಕ್ಲಬ್ ಮಾಡಿಕೊಂಡು ಬಂದಿದೆ ಎಂದು ಸೀನಿಯರ್ ಸಿಟಿಜನ್ ಕ್ಲಬ್ ನ ಹಿರಿಯ ಸದಸ್ಯರು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಹೆಸರು
ನೋಂದಾಯಿಸಲು ಹಾಗೂ ಹೆಚ್ಚಿನ ವಿವರಗಳನ್ನು ಪಡೆಯಲು ಸಂಪರ್ಕಿಸಿ:ಸೀನಿಯರ್ ಸಿಟಿಜನ್ ಕ್ಲಬ್ ಕಚೇರಿ
ನಂ.9, ಹೀರಾಚಂದ್ ರಸ್ತೆ,
ಕಾಕ್ಸ್ ಟೌನ್, ಬೆಂಗಳೂರು
ದೂರವಾಣಿ ಸಂಖ್ಯೆ: (080) 2548 8612












Click it and Unblock the Notifications