ದೇಶದ ಜನರ ಮನಗೆದ್ದ ಮೈಕ್ರೋಮ್ಯಾಕ್ಸ್

Micromax mobile phone
ನವದೆಹಲಿ, ಏ. 28 : ನೋಕಿಯಾ, ಸ್ಯಾಮ್ ಸಂಗ್ ಮತ್ತು ಎಲ್ ಜಿ ಗಳಂಥ ಘಟಾನುಘಟಿಗಳ ನಡುವೆ ಎರಡು ವರ್ಷಗಳ ಹಿಂದಷ್ಟೇ ದೇಶದ ಮೊಬೈಲ್ ಹ್ಯಾಂಡ್ ಸೆಟ್ ಗಳ ಮಾರಾಟಕ್ಕೆ ಕಾಲಿಟ್ಟ ಮೈಕ್ರೋಮ್ಯಾಕ್ಸ್ ಇಂದು ಅಚ್ಚರಿಗೊಳಿಸುವ ಬೆಳವಣಿಗೆ ದಾಖಲಿಸಿದ್ದು ದೇಶದ ಮೂರನೇ ಅತೀ ದೊಡ್ಡ ಕಂಪನಿಯಾಗಿ ಹೊರಹೊಮ್ಮಿದೆ.

ಸಂಶೋದನಾ ಸಂಸ್ಥೆ ಐಡಿಸಿ ಪ್ರಕಾರ ನೋಕಿಯಾ ಮತ್ತು ಸ್ಯಾಮ್ ಸಂಗ್ ದೇಶದಲ್ಲಿ ಮೊದಲ ಎರಡು ಸ್ಥಾನದಲ್ಲಿದ್ದು ಮೈಕ್ರೋ ಮ್ಯಾಕ್ಸ್ ಶೇ.6 ಮಾರುಕಟ್ಟೆ ಪಾಲು ಹೊಂದಿ ಮೂರನೇ ಸ್ಥಾನ ಆಕ್ರಮಿಸಿಕೊಂಡಿದೆ. ದೇಶಾದ್ಯಂತ 500ಕ್ಕೂ ಅಧಿಕ ಜಿಲ್ಲೆಗಳಲ್ಲಿ 70 ಸಾವಿರಕ್ಕೂ ಅಧಿಕ ಮಾರಾಟಗಾರರನ್ನು ಹೊಂದಿರುವ 1600 ಕೋಟಿ ರು.ಗಳ ಮೈಕ್ರೋಮ್ಯಾಕ್ಸ್ ಪ್ರತೀ ತಿಂಗಳೂ ಒಂದು ಮಿಲಿಯನ್ ಜಿಎಸ್ಎಮ್ ಹ್ಯಾಂಡ್ ಸೆಟ್ ಗಳನ್ನು ಮಾರಾಟ ಮಾಡುತ್ತಿದೆ.

2000ನೇ ಇಸವಿಯಿಂದಲೂ ಹಾರ್ಡ್ ವೇರ್ ಗಳ ಮರು ಮಾರಾಟದಲ್ಲಿ, ವಿತರಣೆಯಲ್ಲಿ ತೊಡಗಿಕೊಂಡಿದ್ದ ಮೈಕ್ರೋಮ್ಯಾಕ್ಸ್ ಟೆಕ್ನಾಲಜೀಸ್ ನೊಕಿಯಾ ಮತ್ತು ಏರ್ ಟೆಲ್ ನ ಉತ್ಪನ್ನಗಳ ಮಾರಾಟ ಹಾಗೂ ಸೇವೆಯಲ್ಲಿ ತೊಡಗಿಕೊಂಡಿತ್ತು. 2008ರಲ್ಲಿ ನಾಲ್ಕು ಪಾಲುದಾರರಾದ ರಾಜೇಶ್ ಅಗರ್ ವಾಲ್, ಸುಮೀತ್ ಅರೋರಾ, ರಾಹುಲ್ ಶರ್ಮಾ ಮತ್ತು ವಿಕಾಸ್ ಜೈನ್ ಹಾರ್ಡ್ ವೇರ್ ಗಳ ಮಾರಾಟದ ಜತೆಗೇ ಮೊಬೈಲ್ ಹ್ಯಾಂಡ್ ಸೆಟ್ ಗಳ ತಯಾರಿಕೆಗೂ ಕೈ ಹಾಕಿದರು.

ಎಲ್ಲಾ ಬಹುರಾಷ್ಟ್ರೀಯ ಕಂಪನಿಗಳ ಮೊಬೈಲ್ ಹ್ಯಾಂಡ್ಸೆಟ್ ಗಳು ಭಾರತೀಯ ಗ್ರಾಹಕರ ಅವಶ್ಯಕತೆ ಪೂರೈಸಲು ಸಾದ್ಯವಾಗುತ್ತಿರಲಿಲ್ಲ ಎನ್ನುವ ವಿಕಾಸ್ ಜೈನ್ ಮೊಬೈಲ್ ಹ್ಯಾಂಡ್ ಸೆಟ್ ತಯಾರಿಕೆಗೆ ಮುಂದಾದರು. ಮೊದಲು ಒಂದು ತಿಂಗಳ ದೀರ್ಘಾವಧಿಯ ಬ್ಯಾಟರಿ ಬಾಳಿಕೆ ಗ್ರಾಮೀಣ ಗ್ರಾಹಕರ ಮನ ಗೆದ್ದಿತು. ನಂತರ ಹಿಂತಿರುಗಿ ನೋಡಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳದೇ ಸಾಮ್ಯಾಜ್ಯವಾಗಿರುವ ಮೊಬೈಲ್ ಮಾರುಕಟ್ಟೆಯಲ್ಲಿ ಇಂದು ಅಪ್ಪಟ ಭಾರತೀಯ ಕಂಪನಿ ಮಿಂಚುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+