ಬೆಂಗಳೂರು ಭಾರತದ ಟ್ವಿಟ್ಟರ್.ಕಾಂ ರಾಜಧಾನಿ

Bangalore is India’s No 1 city on Twitter
ಬೆಂಗಳೂರು, ಏ.28: ಸಾಮಾಜಿಕ ಜಾಲ ತಾಣ ವಲಯದಲ್ಲಿ ಟ್ವಿಟ್ಟರ್.ಕಾಂ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದೆ. ಎಲ್ಲ ವರ್ಗದ ಜನರನ್ನು ಆಕರ್ಷಿಸುತ್ತಿರುವ ಟ್ವಿಟ್ಟರ್.ಕಾಂ ಸ್ಥಳೀಯವಾಗಿ ಹೆಚ್ಚೆಚ್ಚು ಹತ್ತಿರವಾಗುತ್ತಿದ್ದಂತೆ, ಭಾರತದ ಟ್ವಿಟ್ಟರ್ ರಾಜಧಾನಿ ಯಾವುದೇ ಎಂಬ ಸಮೀಕ್ಷೆ ನಡೆಸಲಾಯಿತು. ಇದರ ಫಲಿತಾಂಶದಂತೆ ಭಾರತದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಅಗ್ರಸ್ಥಾನವನ್ನು ಗಳಿಸಿದೆ. ವಿಶ್ವದ ಅಗ್ರ 100 ನಗರಗಳ ಪಟ್ಟಿಯಲ್ಲಿ ಬೆಂಗಳೂರು 23 ಸ್ಥಾನದಲ್ಲಿದೆ.

ಟ್ವಿಟ್ಟರ್ ಎಂಬ ಮೈಕ್ರೋ ಬ್ಲಾಗಿಂಗ್ ತಾಣಕ್ಕೆ ಲಗ್ಗೆ ಇಡುವವರು ನಿರೀಕ್ಷೆಯಂತೆ ಅಮೆರಿಕದ ನಗರಗಳಲ್ಲೇ ಹೆಚ್ಚು. ಆದರೂ, ಮೊದಲ 100 ನಗರಗಳಲ್ಲಿ ಅಮೆರಿಕದ 47 ನಗರಗಳಿವೆ. ಈ ಸಮೀಕ್ಷೆಯಲ್ಲಿ ಅಮೆರಿಕದಲ್ಲಿ ನೆಲೆಸಿರುವ ಬೆಂಗಳೂರಿಗರನ್ನು ಗಣನೆಗೆ ತೆಗೆದುಕೊಂಡಿಲ್ಲ. ಬೆಂಗಳೂರಿನ ನಿವಾಸಿಗಳನ್ನು ಮಾತ್ರ ಪರಿಗಣಿಸಲಾಗಿದೆ.

ಯುಕೆಯ 9 ನಗರಗಳು ಮೊದಲ 100 ನಲ್ಲಿ ಸ್ಥಾನ ಪಡೆದಿರುವುದು ಹಲವರ ಹುಬ್ಬೇರಿಸುವಂತೆ ಮಾಡಿದೆ. ಭಾರತದ 7 ನಗರಗಳನ್ನು ಮಾತ್ರ ಈ ಪಟ್ಟಿಯಲ್ಲಿ ಕಾಣಬಹುದು. ಬೆಂಗಳೂರು ಹೊರತು ಪಡಿಸಿ, ಮುಂಬೈ(27), ನವ ದೆಹಲಿ(46), ಚೆನ್ನೈ (58), ಹೈದರಾಬಾದ್ (77) ಹಾಗೂ ಪುಣೆ (83). ಇದರ ಜೊತೆಗೆ ಪಟ್ಟಿಯ ಕೊನೆಯಲ್ಲಿ ದೆಹಲಿ ನಗರ 99 ಸ್ಥಾನದಲ್ಲಿದೆ. ಉಳಿದಂತೆ ಆಸ್ಟ್ರೇಲಿಯಾ(4), ಬ್ರೆಜಿಲ್ (4) ಹಾಗೂ ಕೆನಡಾ (5) ಪ್ರಮುಖ ನಗರಗಳಾಗಿವೆ. ಆದರೆ, ಏಷ್ಯಾ ಫೆಸಿಫಿಕ್ ಪ್ರಾಂತ್ಯದಲ್ಲಿ ವಿಶೇಷ ಸ್ಥಾನ ಹೊಂದಿರುವ ಜಪಾನ್ ನಗರಗಳಲ್ಲಿ ಟೋಕಿಯೋ ಮಾತ್ರ ಈ ಪಟ್ಟಿಯಲ್ಲಿದೆ.

ಎಸ್ ಎಂಎಸ್ ಪ್ರಿಯರಿಗೆ ಇಷ್ಟವಾಗಬಲ್ಲ ಟ್ವಿಟ್ಟರ್.ಕಾಂ ಎಂಬ ಮೈಕ್ರೋ ಬ್ಲಾಗಿಂಗ್ ನಲ್ಲಿ ಟ್ವೀಟ್ ಮಾಡಲು 140 ಅಕ್ಷರಗಳ ಮಿತಿ ಇರುತ್ತದೆ. ಇಂಗ್ಲೀಷ್ ಅಲ್ಲದೆ, ಅನೇಕ ಸ್ಥಳೀಯ ಭಾಷೆಗಳಲ್ಲಿ ಸಂದೇಶ ಹಾಕಬಹುದು. ಟ್ವೀಟರ್ ನಲ್ಲಿ ವೈಯಕ್ತಿಕ ಸಂದೇಶವಲ್ಲದೆ, ಸುದ್ದಿ, ಮನರಂಜನೆ, ನೌಕರಿ ಸಂಬಂಧಿತ ಟ್ವೀಟ್ ಗಳಿಗಾಗಿ ಹೆಚ್ಚೆಚ್ಚು ಜನರು ಬಳಸುತ್ತಾರೆ ಎನ್ನುತ್ತದೆ ಒಂದು ಸಮೀಕ್ಷೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+