ಮೇ 1 : ಪ್ರಯಾಣಿಕರಿಗೊಂದು ಸೂಚನೆ...
ನಾಗಪುರ್,
ಏ. 27 : ಸಂಬಳ ಮತ್ತು ಸೇವಾ ಭತ್ಯೆ ಏರಿಸುವಂತೆ ಒತ್ತಾಯಿಸಿ ಮೇ 1 ಕಾರ್ಮಿಕರ ದಿನದಂದು ಆಲ್ ಇಂಡಿಯಾ ಟ್ರೇನ್ ಕಂಟ್ರೋಲರ್ಸ್ ಅಸೋಸಿಯೇಷನ್ ಸಾಮೂಹಿಕ ರಜೆ ತೆಗೆದುಕೊಳ್ಳಲು ನಿರ್ಧರಿಸಿದೆ. ಇದರಿಂದ ಮೇ 1 ರಂದು ರೈಲುಗಳ ಸಂಚಾರದಲ್ಲಿ ತೀವ್ರ ಅಡಚಣೆ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ. id="toptextpromo">ರೈಲುಗಳು
ಮುಖ್ಯ ಕಂಟ್ರೋಲರ್ ಮತ್ತು ಉಪಕಂಟ್ರೋಲರ್ ಗಳಿಗೆ ಗೆಜೆಟೆಡ್ ಶ್ರೇಣಿಗೆ ಭರ್ತಿ ನೀಡಬೇಕು ಜೊತೆಗೆ ಹುದ್ದೆಗೆ ತಕ್ಕಂತೆ ಸಂಬಳ ಮತ್ತು ಸೇವಾ ಭತ್ಯೆನ್ನು ನೀಡಬೇಕು. ಸಂಘದ ಬೇಡಿಕೆ ಈಡೇರಿಸದಿದ್ದರೆ ಮೇ 1 ಕಾರ್ಮಿಕರ ದಿನದಂದು ಸಾಮೂಹಿಕ ರಜೆ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ಮನವಿಯನ್ನು ಮಂಗಳವಾರ ಆಲ್ ಇಂಡಿಯಾ ಕಂಟ್ರೋಲರ್ ಗಳ ಸಂಘ ಮನವಿ ಸಲ್ಲಿಸಿದೆ. id='are-slot-1' class='oiad oi-axt oiadv'> id='top-searched-articles'>ಅಲ್ಲದೇ
ಕಂಟ್ರೋಲರ್ ಹುದ್ದೆ ಸೇರಿದಂತೆ ಇಲಾಖೆಯಲ್ಲಿ ಶೇಕಡಾ 25 ರಷ್ಟು ಹುದ್ದೆಗಳು ಖಾಲಿ ಇವೆ. ಅವುಗಳನ್ನು ಕೂಡಲೇ ಭರ್ತಿ ಮಾಡಬೇಕು. ಮುಖ್ಯವಾಗಿ ಕಂಟ್ರೋಲರ್, ಸ್ಟೇಷನ್ ಮಾಸ್ಟರ್, ಮೂವ್ ಮೆಂಟ್ ಇನ್ಸ್ ಪೆಕ್ಟರ್ ಹಾಗೂ ಭದ್ರತಾ ಪಡೆಯ ಸಿಬ್ಬಂದಿಗಳ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.











Click it and Unblock the Notifications