ರೋಡಿಗಿಳಿದ ಯಮಹಾ ವೈಬಿಆರ್ 110 ಸಿಸಿ

ನವದೆಹಲಿ,ಏ.26: ಇಂಡಿಯಾ ಯಮಹಾ ಮೋಟಾರ್ ಪ್ರೈವೇಟ್ ಲಿಮಿಟೆಡ್ ಭಾರತೀಯ ಮಾರುಕಟ್ಟೆಗೆ ವೈಬಿಆರ್ 110 ಎಂಬ ನೂತನ ಬೈಕ್ ನ್ನು ಬಿಡುಗಡೆಗೊಳಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಕಂಪೆನಿಯ ದಕ್ಷಿಣ ವಿಭಾಗದ ಮಾರಾಟ ವ್ಯವಸ್ಥಾಪಕ ಜಾಯ್ ಕುರಿಯನ್ ಅವರು 150 ಸಿಸಿ ಶ್ರೇಣಿಯಲ್ಲಿ ಬೈಕ್ ಗಳನ್ನು ಯಶಸ್ವಿಯಾಗಿ ಬಿಡುಗಡೆಮಾಡಿದ ನಂತರ ಇದೀಗ ಕಂಪೆನಿ ವೈಬಿಆರ್ 110 ನ್ನು ಬಿಡುಗಡೆ ಮಾಡಲಾಗಿದೆ. ಇದು ಉತ್ತಮ ವಿನ್ಯಾಸ ಹೊಂದಿದ್ದು ಆರಾಮದಾಯಕವಾಗಿದೆ ಎಂದು ಹೇಳಿದರು.

ಕಂಪೆನಿ ಪ್ರವೇಶ ಮಟ್ಟದ ಅಧಿಕ ಮೈಲೇಜ್ ನೀಡುವ ಬೈಕ್ ಗಳ ತಯಾರಿಕೆಗೂ ಮುಂದಾಗಿದೆ ಎಂದ ಅವರು ಯಮಹಾ ಭಾರತವನ್ನು ತನ್ನ ಪ್ರಮುಖ ತಯಾರಿಕಾ ಕೇಂದ್ರವನ್ನಾಗಿಸಿಕೊಂಡು ಅಂತಾರಾಷ್ಟ್ರೀಯ ಮಾರುಕಟ್ಟೆಗೂ ತನ್ನ ಪ್ರೀಮಿಯಂ ಬೈಕ್ ಗಳನ್ನು ರಫ್ತು ಮಾಡಲು ಮುಂದಾಗಿದೆ ಎಂದರು .ಯಮಹಾ ವೈಬಿಆರ್ 110 ಬೈಕ್ ನ ಬೆಲೆ ಸುಮಾರು 41,000(ನವದೆಹಲಿ ಷೋರೂಂ ಬೆಲೆಯಂತೆ) ಕಪ್ಪು, ಕೆಂಪು ಹಾಗೂ ಕೆಂಪು ಮಿಶ್ರಿತ ಕಪ್ಪು ಈ ಮೂರು ಬಣ್ಣಗಳಲ್ಲಿ ಬೈಕ್ ಸದ್ಯಕ್ಕೆ ಲಭ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+