ಆರತಕ್ಷತೆ ಪ್ರಸಾರಕ್ಕೆ 3.5 ಕೋ.ರು ಬೇಡಿಕೆ
ಲಾಹೋರ್,
ಏ. 26 : ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ವಿವಾಹವಾದ ನಂತರ ತವರು ನಗರ ಸಿಯಾಲ್ ಕೋಟ್ ನಲ್ಲಿ ನಡೆಯಲಿರುವ ಆರತಕ್ಷತೆಯ(ವಲಿಮಾ) ಪ್ರಸಾರ ಹಕ್ಕು ನೀಡಲು 3.5 ಕೋಟಿ ರುಪಾಯಿಗಳ ಬೇಡಿಕೆಯನ್ನು ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ಇಟ್ಟಿದ್ದಾರೆ. id="toptextpromo">ಇದಕ್ಕೆ
ಯಾವುದೇ ನ್ಯೂಸ್ ಚಾನೆಲ್ ಗಳು ಒಪ್ಪದಿರುವ ಕಾರಣ ತಮ್ಮ ಆರತಕ್ಷತೆ ಕಾರ್ಯಕ್ರಮದಿಂದ ಮಾಧ್ಯಮಗಳನ್ನು ದೂರವಿರಿಸಲು ಮಲಿಕ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮಲಿಕ್ ಅವರ ಸಂಬಂಧಿಕರಿಗೆ 10 ಸಾವಿರ ರುಪಾಯಿ ನೀಡುವ ಮೂಲಕ ಲಾಹೋರ್ ನ ಪಿಯರ್ಸ್ ಕಾಂಟಿನೆಂಟಲ್ ಹೋಟೆಲ್ ನಲ್ಲಿ ನಡೆಯಲಿರುವ ಆರತಕ್ಷತೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ತಲುಪಿದೆ ಎಂದು ಚಾನೆಲೊಂದು ಹೇಳಿದೆ. id='are-slot-1' class='oiad oi-axt oiadv'> id='top-searched-articles'>ತಮಗೆ
ಮತ್ತು ಭಾರತದಿಂದ ಬರುವ ಅತಿಥಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪಂಜಾಬ್ ಪ್ರಾಂತ್ಯದ ಸರಕಾರಕ್ಕೆ ಶೋಯೆಬ್ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ. ಏ. 27 ರಂದು ಆರತಕ್ಷತೆ ನಂತರ ಸಾನಿಯಾ ಶೋಯೆಬ್ ಹನಿಮೂನಿ ಗಾಗಿ ಮಾಲ್ಡಿವ್ಸ್ ಗೆ ತೆರಳಲಿದ್ದಾರೆ.











Click it and Unblock the Notifications