ಬೆಂಗಳೂರು ಒನ್ ಗೆ ವೆಬ್ ರತ್ನ ಪ್ರಶಸ್ತಿ

IT Minister A Raja
ಬೆಂಗಳೂರು, ಏ.26: ಬೆಂಗಳೂರು ಒನ್ ನಾಗರೀಕ ಸೇವಾ ಕೇಂದ್ರಗಳ ಉತ್ಕೃಷ್ಟ ಸೇವೆಗಾಗಿ 2009ನೇ ಸಾಲಿನ ವೆಬ್‌ರತ್ನ ಸಿಲ್ವರ್ ಐಕಾನ್ ಪ್ರಶಸ್ತಿ ಪಡೆದುಕೊಂಡಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ ಮತ್ತು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ರಾಷ್ಟ್ರದಲ್ಲಿ ಇ-ಆಡಳಿತದ ಯೋಜನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.

ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಕೇಂದ್ರ ಸಚಿವ ಎ.ರಾಜಾ ಇತ್ತೀಚೆಗೆ ನವದೆಹಲಿಯ ವಿಜ್ಞಾನ್ ಭವನ್ ನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಸಚಿನ್ ಪೈಲಟ್ ಸಹ ಉಪಸ್ಥಿತರಿದ್ದರು.

ವೆಬ್ ರತ್ನ ಪ್ರಶಸ್ತಿಗಳು: ಅತ್ಯುತ್ತಮವಾದ ಭಾರತೀಯ ವೆಬ್ ತಾಣಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ವೆಬ್ ರತ್ನ ಪ್ರಶಸ್ತಿಯನ್ನು ವಿವಿಧ ವಿಭಾಗಳಲ್ಲಿ ನೀಡುತ್ತಿದೆ. ಭಾರತದಲ್ಲಿ ಇ-ಆಡಳಿತ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಮುಖ್ಯವಾಗಿ ವೆಬ್ ರತ್ನ ಪ್ಲಾಟೀನಂ, ವೆಬ್ ರತ್ನ ಗೋಲ್ಡ್ ಹಾಗೂ ವೆಬ್ ರತ್ನ ಸಿಲ್ವರ್ ಪ್ರಶಸ್ತಿ ಈ ಮೂರು ವಿಭಾಗದಲ್ಲಿ ವಿವಿಧ ರಾಷ್ಟ್ರೀಯ ಮಟ್ಟದ ವೆಬ್ ಸೈಟ್ ಗಳನ್ನು ಪ್ರಶಸ್ತಿಗೆ ಆರಿಸಲಾಗುತ್ತದೆ.

ಇತ್ತೀಚೆಗೆ ಕರ್ನಾಟಕಕ್ಕೆ ಶ್ರೇಷ್ಠ ಪಂಚಾಯತ್ ರಾಜ್ ವ್ಯವಸ್ಥೆಹೊಂದಿರುವ ರಾಜ್ಯ ಎಂಬ ಗೌರವವು ಲಭಿಸಿದೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಗ್ರಾಮಗಳಲ್ಲಿ ಸಮರ್ಥವಾಗಿ ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಹಾಗೂ ಕೇರಳಕ್ಕೆ ಪ್ರಥಮ ಸ್ಥಾನ ಗಳಿಸಿ, ತಲಾ 2.5ಕೋಟಿ ರು ಗಳಿಸಿದ್ದವು. ತಮಿಳುನಾಡು, ಪಶ್ಚಿಮ ಬಂಗಾಳ ಎರಡನೇ ಸ್ಥಾನ ಹಾಗೂ ಮಹಾರಾಷ್ಟ್ರ ಮೂರನೇ ಸ್ಥಾನ ಪಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+