ಕಾಮೆಡ್ ಕೆ ಕೌನ್ಸೆಲಿಂಗ್ ರದ್ದು
ಬೆಂಗಳೂರು,
ಏ. 23 : ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಹಂಚಿಕೆಯಲ್ಲಿ ಮಧ್ಯವರ್ತಿಗಳ ಹಾವಳಿಯ ಹಿನ್ನೆಲೆಯಲ್ಲಿ ಕಾಮೆಡ್ ಕೆ ನ ಮೊದಲ ಮತ್ತು ಅಂತಿಮ ಸುತ್ತಿನ ಕೌನ್ಸೆಲಿಂಗ್ ರದ್ದುಪಡಿಸಿದ್ದು, ಇದೇ ತಿಂಗಳು 29 ರಂದು ಮತ್ತೆ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಕಾಮೆಡ್ ಕೆ ಸ್ಪಷ್ಪಪಡಿಸಿದೆ. id="toptextpromo">ಗುರುವಾರ
ಅಂತಿಮ ಸುತ್ತಿನ ಕೌನ್ಸೆಲಿಂಗ್ ನಡೆಯುವಾಗ ಕೆಲವು ವಿದ್ಯಾರ್ಥಿಗಳು ಹಾಗೂ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಮಧ್ಯವರ್ತಿಗಳ ಮೂಲಕ 18 ಸೀಟುಗಳು ಮಾರಾಟವಾಗುತ್ತಿದ್ದುದನ್ನು ಬಹಿರಂಗಗೊಳಿಸಿದ ಹಿನ್ನೆಲೆಯಲ್ಲಿ ದಿಢೀರನೇ ಕೌನ್ಸೆಲಿಂಗ್ ರದ್ದು ಮಾಡಲಾಗಿದೆ. id='are-slot-1' class='oiad oi-axt oiadv'> id='top-searched-articles'>ಇದೇ
ತಿಂಗಳು 29 ಮತ್ತು 30ರಂದು ಅಂತಿಮ ಸುತ್ತಿನ ಮರು ಕೌನ್ಸೆಲಿಂಗ್ ನಡೆಯಲಿದೆ. ಹೀಗಾಗಿ ಇದೇ ತಿಂಗಳ 10 ರಂದು ಮೊದಲ ಸುತ್ತಿನ ಕೌನ್ಸೆಲಿಂಗ್ ಮೂಲಕ ಸೀಟು ಆಯ್ಕೆ ಮಾಡಿಕೊಂಡಿರುವವರು ಆತಂಕಕ್ಕೆ ಒಳಗಾಗಿದ್ದಾರೆ. ಇದೇ ತಿಂಗಳ 26,27 ರಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸರಕಾರಿ ಕೋಟಾದ ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲಿದೆ. ಇದಾದ ನಂತರ ಕಾಮೆಡ್ ಕೆ ಮರು ಕೌನ್ಸೆಲಿಂಗ್ ನಡೆಸಲು ತೀರ್ಮಾನಿಸಿದ್ದು, ಜೆಪಿ ನಗರದಲ್ಲಿರುವ ಆರ್ ವಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಕೌನ್ಸೆಲಿಂಗ್ ನಡೆಯಲಿದೆ ಎಂದು ಕಾಮೆಡ್ ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಸ್ ಕುಮಾರ್ ತಿಳಿಸಿದ್ದಾರೆ.











Click it and Unblock the Notifications