ಸೆನ್ಸೆಕ್ಸ್ 120 ಲಾಭಾಂಶ ; ರಿಲಯನ್ಸ್ ಶೇ.1ಏರಿಕೆ

BSE Sensex
ಮುಂಬೈ ,ಏ.23: ಇಂದು 17,694.20 ಅಂಶಗಳ ಕುಸಿತದೊಂದಿಗೆ ವಹಿವಾಟು ಆರಂಭಿಸಿದ ಮುಂಬೈ ಶೆರು ಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, ಹೂಡಿಕೆದಾರರು ದೊಡ್ಡ ಷೇರುಗಳ ಖರೀದಿಯಲ್ಲಿ ತೊಡಗಿದ್ದರಿಂದ ಏರಿಕೆ ದಾಖಲಿಸಿ 17,726 ಅಂಶಗಳಿಗೂ ತಲುಪಿತು. ದಿನದ ಅಂತ್ಯಕ್ಕೆ 120 ಅಂಶಗಳ ಏರಿಕೆ ದಾಖಲಿಸಿ 17,694.20ಅಂಶಗಳಿಗೆ ವಹಿವಾಟು ಮುಗಿಸಿದೆ. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 35 ಅಂಶಗಳ ಏರಿಕೆ ದಾಖಲಿಸಿ 5304 ಅಂಶಗಳಿಗೆ ವಹಿವಾಟುಮುಗಿಸಿದೆ.

ಮುಂಬೈ ಪೇಟೆಯ ಬ್ಯಾಂಕಿಂಗ್ ಸೂಚ್ಯಂಕ ಶೇ.2 ಏರಿಕೆ ದಾಖಲಿಸಿದ್ದು, ಇಂದು ವಹಿವಾಟಾದ 3000 ಕಂಪೆನಿಗಳ ಷೇರುಗಳಲ್ಲಿ 1500 ಕುಸಿತ ದಾಖಲಿಸಿವೆ. ಇಂದು ತ್ರೈಮಾಸಿಕ ಫಲಿತಾಂಶ ಪ್ರಕಟಿಸಬೇಕಿದ್ದ ದೇಶದ ಅತೀ ದೊಡ್ಡ ಕಂಪೆನಿ ರಿಲಯನ್ಸ್ ಶೇ.1 ಏರಿಕೆ ದಾಖಲಿಸಿ ರೂ 1087 ಕ್ಕೆ ವಹಿವಾಟು ಮುಗಿಸಿದೆ.

ನಾಳೆ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿರುವ ಐಸಿಐಸಿಐ ಬ್ಯಾಂಕ್ ಶೇ.3 ಏರಿಕೆ ದಾಖಲಿಸಿ 976 ರೂಪಾಯಿಗಳಿಗೆ ಏರಿದೆ. ಜೈ ಪ್ರಕಾಶ್ ಅಸೋಸಿಯೇಟ್ಸ್ , ಲಾರ್ಸನ್ ಅಂಡ್ ಟಬ್ರೋ, ಮಹೀಂದ್ರಾ, ಡಿಎಲ್ ಎಫ್, ಮತ್ತು ಟಾಟಾ ಪವರ್ ಏರಿಕೆಯೊಂದಿಗೇ ವಹಿವಾಟು ಮುಗಿಸಿವೆ. ಏಸಿಸಿ ಶೇ.2 ಕುಸಿತ ದಾಖಲಿಸಿ ರೂ 902 ಕ್ಕೆ, ಭಾರ್ತಿ , ಸನ್ ಫಾರ್ಮ, ವಿಪ್ರೋ , ಮತ್ತು ಹೀರೋ ಹೋಂಡಾ ಕುಸಿತ ದಾಖಲಿಸಿವೆ .

ಇಂದು ಮುಂಬೈ ಪೇಟೆಯಲ್ಲಿ ಮಣಪ್ಪುರಂ ಜನರಲ್ ಫೈನಾನ್ಸ್ ನ ಷೇರುಗಳು ಹೆಚ್ಚು ಸಕ್ರಿಯವಾಗಿದ್ದು ಇದರ 315 ಕೋಟಿ, ಎಸ್ ಬಿ ಐ ನ 194 ಕೋಟಿ ಮತ್ತು ಟಾಟಾ ಸ್ಟೀಲ್ ನ 130 ಕೋಟಿ ರೂಪಾಯಿ ಶೇರುಗಳು ವಹಿವಾಟು ದಾಖಲಿಸಿವೆ. ಶೇರುಗಳ ವಹಿವಾಟು ಪ್ರಮಾಣದಲ್ಲಿ ಎಫ್ ಸಿ ಎಸ್ ಸಾಫ್ಟ್ ವೇರ್ ಮುಂದಿದ್ದು ಇದರ 20.2 ಮಿಲಿಯ, ವಿಸಾ ಸ್ಟೀಲ್ಸ್ ನ 16.1 ಮಿಲಿಯ, ಕಾಲ್ಸ್ ರಿಫೈನರೀಸ್ ನ 11 ಮಿಲಿಯ ಮತ್ತು ಡೆವಲಪ್ ಮೆಂಟ್ ಕ್ರೆಡಿಟ್ ಬ್ಯಾಂಕಿನ 10.6 ಮಿಲಿಯ ಷೇರುಗಳು ವಹಿವಾಟು ದಾಖಲಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+