ರೋಲ್ಸ್ ರಾಯ್ಸ್ ಜೊತೆ ಕೈಜೋಡಿಸಿದ ಟಿಸಿಎಸ್
ಮುಂಬೈ,
ಏ.22: ಪ್ರಖ್ಯಾತ ಬ್ರಿಟನ್ನಿನ ಆಟೋಮೊಬೈಲ್ ಕಂಪನಿ ರೋಲ್ಸ್ ರಾಯ್ಸ್ ಜೊತೆ ಭಾರತದ ಮುಂಚೂಣಿ ಐಟಿ ಸೇವಾ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಕೈಜೋಡಿಸಿದೆ. ಎರಡು ಕಂಪನಿಗಳು ಪರಸ್ಪರ ವಾಣಿಜ್ಯ ಒಪ್ಪಂದಕ್ಕೆ ಸಹಿಹಾಕಿವೆ. id="toptextpromo">ಒಪ್ಪಂದದ
ಪ್ರಕಾರ ರೋಲ್ಸ್ ರಾಯ್ಸ್ ಕಂಪನಿಯ ಇಂಜಿನ್ ತಯಾರಿಕೆಗೆ ನವೀನ ವಿನ್ಯಾಸ ಮತ್ತು ಇಂಜಿನಿಯರಿಂಗ್ ಸೇವೆಯನ್ನು ಟಿಸಿಎಸ್ ಒದಗಿಸಲಿದೆ. ಬುಧವಾರ(ಏ.22) ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಟಿಸಿಎಸ್ ಈ ವಿಷಯವನ್ನು ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'> ಈ ಸಂಬಂಧ ಬೆಂಗಳೂರಿನಲ್ಲಿ ತಂತ್ರಜ್ಞಾನ ಕೇಂದ್ರವನ್ನು ಸ್ಥಾಪಿಸುತ್ತಿದೆ. ಈ ಸಂಸ್ಥೆಯ ಮೂಲಕ ರೋಲ್ಸ್ ರಾಯ್ಸ್ ಕಂಪನಿಯ ಇಂಜಿನ್ ಗಳಿಗೆ ಹೊಸ ವಿನ್ಯಾಸ, ಇಂಜಿನಿಯರಿಂಗ್ ಸೇವೆಗಳನ್ನು ಟಿಸಿಎಸ್ ಒದಗಿಸಲಿದೆ.ಟಿಸಿಎಸ್ ಹಾಗೂ ರೋಲ್ಸ್ ರಾಯ್ಸ್ ವಾಣಿಜ್ಯ ಒಪ್ಪಂದದ ಹಣಕಾಸು ವಿವರಗಳನ್ನು ಬಹಿರಂಗಪಡಿಸಿಲ್ಲ.











Click it and Unblock the Notifications