ಅಮೆರಿಕ ರಾಯಭಾರಿ ಕಚೇರಿ ಮೇಲೆ ದಾಳಿ?
ವಾಷಿಂಗ್ಟನ್,
ಏ. 22 : ಭಾರತದ ಮೆಟ್ರೋ ನಗರಗಳು ಸೇರಿದಂತೆ ಅಲ್ಲಿರುವ ಅಮೆರಿಕನ್ ಕಚೇರಿಗಳ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಸಚಿವಾಲಯದ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. id="toptextpromo">ಭಾರತದ
ಪ್ರಮುಖ ನಗರಗಳನ್ನು ಉಗ್ರರು ಗುರಿಯಾಗಿರಿಸಿಕೊಂಡಿದ್ದಾರೆ ಜೊತೆಗೆ ಭಾರತದಲ್ಲಿರುವ ಅಮೆರಿಕನ್ ಪ್ರಜೆಗಳು ಮತ್ತು ಅಮೆರಿಕನ್ ರಾಯಭಾರಿ ಕಚೇರಿಗಳ ಮೇಲೆ ಭಯೋತ್ಪಾದರ ಕೆಂಗಣ್ಣು ಬಿದ್ದಿದೆ. ಈ ಬಗ್ಗೆ ನಮ್ಮ ಬಳಿ ಸಾಕಷ್ಟು ಸಾಕ್ಷಿಗಳು ಇವೆ. ಹೀಗಾಗಿ ಭಾರತದಲ್ಲಿರುವ ಅಮೆರಿಕನ್ ರಾಯಭಾರಿ ಕಚೇರಿ ಎಚ್ಚರಿಕೆ ಗಂಟೆಯನ್ನು ತಲುಪಿಸಲಾಗಿದೆ ಎಂದು ಒಬಾಮಾ ಕಚೇರಿ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ನಮ್ಮ
ಬಳಿ ಇರುವ ಸಾಕ್ಷಿಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲಾಗಿದೆ. ಮನಮೋಹನ್ ಸಿಂಗ್ ಸರಕಾರ ಕೂಡ ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ. ಜೊತೆಗೆ ಅಮೆರಿಕ ಮತ್ತು ಭಾರತ ಗುಪ್ತಚರ ಇಲಾಖೆಗಳು ಉಗ್ರರ ದಾಳಿ ಸಂಬಂಧ ಸಾಕಷ್ಟು ಚರ್ಚೆ ನಡೆಸಿವೆ ಎಂದು ಅಮೆರಿಕ ಹೇಳಿದೆ.











Click it and Unblock the Notifications