ಸಾನಿಯಾ ದಂಪತಿಗಳಿಗೆ ಕೇಸುಗಳ ಕಾಟ
ಹೈದರಾಬಾದ್,ಏ.
22 : ಮದುವೆ ಮುಗಿಸಿಕೊಂಡು ಪಾಕಿಸ್ತಾನದಲ್ಲಿ ಭರ್ಜರಿ ರಿಸಪ್ಷನ್ ಮಾಡಿಕೊಳ್ಳುವ ಕನಸು ಹೊತ್ತಿದ್ದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಕ್ರಿಕೆಟ್ಟಿಗ ಶೋಯೆಬ್ ಮಲ್ಲಿಕ್ ದಂಪತಿಗೆ ಕಷ್ಟಕಾಲ ಇನ್ನು ದೂರವಾಗಿಲ್ಲ. ಮೊಕದ್ದಮೆ ಮೇಲೆ ಮೊಕದ್ದಮೆ ಎದುರಿಸುವ ಪ್ರಸಂಗಕ್ಕೆ ಈಇಬ್ಬರು ತುತ್ತಾಗಿದ್ದಾರೆ. id="toptextpromo">ಹೈದರಾಬಾದ್
ನ ಮುಸ್ಲಿಂ ಸಂಘಟನೆಯೊಂದು ನವದಂಪತಿಗಳಾದ ಸಾನಿಯಾ ಮಿರ್ಜಾ, ಶೋಯೆಬ್ ಮಲಿಕ್ ಸೇರಿದಂತೆ 14 ಮಂದಿ ತಮ್ಮ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದನ್ವಯ ಪ್ರಕರಣವನ್ನು ದಾಖಲಿಸುವಂತೆ ನ್ಯಾಯಾಲಯ ಪೋಲಿಸರಿಗೆ ಆದೇಶಿಸಿದೆ. ನಗರದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೆಟರ್ ಮೇ. 26ರ ಒಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಶೋಯೆಬ್
ಮಲಿಕ್, ಸಾನಿಯಾ ಮಿರ್ಜಾ, ವಿಚ್ಛೇದನ ಪಡೆದ ಮಲಿಕ್ ಮಾಜಿ ಪತ್ನಿ ಆಯೇಶ ಸಿದ್ದಿಕಿ, ಸಾನಿಯಾ ತಂದೆ ಇಮ್ರಾನ್ ಮಿರ್ಜಾ, ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಸಂಸದ ಅಜರುದ್ದೀನ್ ಸೇರಿದಂತೆ 14 ಮಂದಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಅಗೌರವ ತೋರಿದ್ದಾ. ಮತ್ತುಆಯೇಶಾ ವಿಷಯದಲ್ಲಿ ಮಲಿಕ್ ಸುಳ್ಳು ಹೇಳಿಕೆ ನೀಡಿ ಮುಸ್ಲಿಂ ಸಮುದಾಯವನ್ನು ಗೊಂದಲಕ್ಕೀಡು ಮಾಡಿದ್ದರೆಂದು ಆರೋಪಿಸಿ ಮಜ್ಲುಮೀನ್ -ಇ ಉಮ್ಮತೆಯ್ ಮೊಹಮ್ಮದೀಯ ಸಂಘಟನೆ ದೂರು ನೀಡಿದೆ.











Click it and Unblock the Notifications