ಹಂತಕಿ ನಳಿನಿಯಿಂದ ಮೊಬೈಲ್ ವಶ
ವೆಲ್ಲೂರು,
ಏ.21: ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ನಳಿನಿಯಿಂದ ವೆಲ್ಲೂರು ಜೈಲಾಧಿಕಾರಿಗಳು ಸೆಲ್‌ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. id="toptextpromo">'ಮಂಗಳವಾರ
ಬೆಳಗ್ಗೆ ಎಂದಿನಂತೆ ತಪಾಸಣೆ ಸಂದರ್ಭದಲ್ಲಿ ನಳಿನಿಯಿಂದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಫೋನ್ ಚಾಲನೆಯಲ್ಲಿತ್ತು.ಮೊಬೈಲ್‌ನಲ್ಲಿ ದಾಖಲಾಗಿರುವ ಕರೆಗಳ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆ ನಂತರ, ನಳಿನಿ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗುವುದು ಎಂದು ಎಡಿಜಿಪಿ ಕೆ.ಆರ್. ಶ್ಯಾಮ್‌ಸುಂದರ್ ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>ಸದ್ಯ
ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ, ಬಿಡುಗಡೆ ಕೋರಿ ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದರು. ಆದರೆ, ಏ.6ರಂದು ಮದ್ರಾಸ್ ಹೈಕೋರ್ಟ್ ನ ವಿಭಾಗೀಯ ಪೀಠ, ನಳಿನಿ ಅವರ ಮನವಿಯನ್ನು ತಿರಸ್ಕರಿಸಿತ್ತು. 1991 ರ ಮೇ.21 ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆಗೈದ ಎಲ್ ಟಿಟಿಇ ತಂಡದಲ್ಲಿ ನಳಿನಿ ಪ್ರಮುಖ ಸದಸ್ಯೆಯಾಗಿದ್ದರು.











Click it and Unblock the Notifications