ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ-ತ್ಯಾಜ್ಯ ವಿಲೇವಾರಿ ನೀತಿ ಜಾರಿ: ರಮೇಶ್

By Mahesh
|
Google Oneindia Kannada News

Jairam Ramesh
ನವದೆಹಲಿ, ಏ.20: ಕಂಪ್ಯೂಟರ್‌, ಮೊಬೈಲ್ ಫೋನ್ ಮುಂತಾದ ಬಳಕೆಯಾದ ವಿದ್ಯುನ್ಮಾನ ಸರಕುಗಳ ಅಕ್ರಮ ಪುನರ್ ಬಳಕೆಯು ಪರಿಸರ ಮತ್ತು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ಸರಕಾರವು ಮುಂದಿನ ತಿಂಗಳು ಇ-ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ನಿಯಮಾವಳಿಗಳನ್ನು ಪ್ರಕಟಿಸಲಿದೆ.

ಸೋಮವಾರ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಪರಿಸರ ಮತ್ತು ಅರಣ್ಯ ಸಚಿವ ಜೈರಾಮ್ ರಮೇಶ್ ಅವರು, ಇ-ತ್ಯಾಜ್ಯವು ಪರಿಸರ ಮತ್ತು ಮಾನವ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತಿರುವುದರಿಂದ ದೇಣಿಗೆಯ ಹೆಸರಿನಲ್ಲಿ ಸೆಕೆಂಡ್ ಹ್ಯಾಂಡ್ ಕಂಪ್ಯೂಟರ್‌ಗಳ ಆಮದಿಗೆ ವೈಯಕ್ತಿಕವಾಗಿ ತಾನು ವಿರುದ್ಧವಾಗಿದ್ದೇನೆ ಎಂದರು. ಆದರೆ ಕಂಪ್ಯೂಟರ್‌ನಂತಹ ಬಳಕೆಯಾದ ವಿದ್ಯುನ್ಮಾನ ಉಪಕರಣಗಳ ಆಮದಿನ ಮೇಲೆ ನಿಷೇಧ ಈ
ನಿಯಮಾವಳಿಗಳಲ್ಲಿ ಸೇರಿದೆಯೇ ಎನ್ನುವುದನ್ನು ಅವರು ತಿಳಿಸಲಿಲ್ಲ.

ಇದೇ ಮೊದಲ ಬಾರಿಗೆ ಸರಕಾರವು ಇ-ತ್ಯಾಜ್ಯ ನಿರ್ವಹಣೆಗಾಗಿ ನಿಯಮಾವಳಿಗಳನ್ನು ತರುತ್ತಿದೆ. ಮೇ 15ರೊಳಗೆ ಅವುಗಳನ್ನು ಪ್ರಕಟಿಸಲಾಗುತ್ತದೆ ಎಂದರು. ಪ್ರಸಕ್ತ ಉತ್ತರ ಪ್ರದೇಶದ ಮೊರಾದಾಬಾದ್ ಮತ್ತು ದಿಲ್ಲಿಯ ಸೀಲಂಪುರದಂತಹ ನಗರಗಳಲ್ಲಿನ ಅನೌಪಚಾರಿಕ ಅಥವಾ ಅಸಂಘಟಿತ ಕ್ಷೇತ್ರದಲ್ಲಿ ಮೊಬೈಲ್ ಫೋನ್‌ಗಳಂತಹ ವಿದ್ಯುನ್ಮಾನ ಉಪಕರಣಗಳ, ಶೇ. 85-90ರಷ್ಟು ಮರುಸಂಸ್ಕರಣೆ ನಡೆಯುತ್ತಿದೆ ಎಂದರು.

ಸಿಪಿಎಸ್‌ಬಿ ನಡೆಸಿರುವ ಸಮೀಕ್ಷೆಯಂತೆ, 2005ರಲ್ಲಿ ದೇಶದಲ್ಲಿ ಅಂದಾಜು 1.47 ಲಕ್ಷ ಟನ್‌ಗಳಷ್ಟು ಇ-ತ್ಯಾಜ್ಯ ಉತ್ಪಾದನೆಯಾಗಿದ್ದು, 2012 ರ ವೇಳೆಗೆ ಇದು ೮ ಲಕ್ಷ ಟನ್‌ಗೆ ಏರುವ ನಿರೀಕ್ಷೆಯಿದೆ. ಅಲ್ಲದೆ, ಸುಮಾರು 50,000 ಟನ್‌ಗಳಷ್ಟು ಇ-ತ್ಯಾಜ್ಯವನ್ನು ದೇಶದೊಳಕ್ಕೆ ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ ಅಥವಾ ಅವನ್ನು ಡಂಪ್ ಮಾಡಲಾಗುತ್ತಿದೆ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X