ಡೆಕ್ಕನ್ 360ಯಲ್ಲಿ ರಿಲಯನ್ಸ್ ರೊಕ್ಕ

ಆದರೆ, ಹೂಡಿಕೆಯ ಮೊತ್ತ ಕುರಿತು ಉಭಯ ಕಂಪನಿಗಳು ಯಾವುದೇ ವಿವರವನ್ನು ಬಹಿರಂಗಪಡಿಸಿಲ್ಲ. ಈ ವಹಿವಾಟು ಷೇರು ಮಾರಾಟವಲ್ಲ, ರಿಲಯನ್ಸ್ ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದೆ. ನೂತನ ಸಂಸ್ಥೆಯಲ್ಲಿ ಆರ್ಐಎಲ್ ಶೇ.26ರಷ್ಟು ಹೊಂದಲಿದೆ ಎಂದು ಗೋಪಿನಾಥ್ ಹೇಳಿದ್ದಾರೆ. ಮಾಲ್ಯದ ಕುರಿತು ಅವರು ಯಾವುದೇ ಮಾಹಿತಿ ನೀಡಿಲ್ಲ.
ಡೆಕ್ಕನ್ 360 ರ ಆಡಳಿತ ಮಂಡಳಿಯ ರಿಲಯನ್ಸ್ ಇಂಡಸ್ಟ್ರೀಸ್ ನ 2 ನಾಮನಿರ್ದೇಶಿತ ಸದಸ್ಯರನ್ನು ಹೊಂದಲಿದೆ. ಒಟ್ಟು 5 ಜನ ಸದಸ್ಯರನ್ನು ಈ ಆಡಳಿತ ಮಂಡಳಿ ಹೊಂದಿದೆ. ಕೆಲ ಖಾಸಗಿ ಈಕ್ವಿಟಿ ಸಂಸ್ಥೆಗಳು ಹಾಗೂ ಬೃಹತ್ ಹೂಡಿಕೆದಾರರ ಜೊತೆ ಮಾತುಕತೆ ನಡೆಸಲಾಗಿತ್ತು. ಅದಾಗ್ಯೂ ರಿಲಯನ್ಸ್ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಕೇವಲ ಗರಿಷ್ಠ ಬಿಡ್ಡಿಂಗ್ ಮಾತ್ರವಲ್ಲ. ಈ ವಹಿವಾಟಿನ ಪೂರ್ಣ ಲಾಭ ಪಡೆಯಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಅವರು ವಿವರಿಸಿದರು.












Click it and Unblock the Notifications