ದಾಖಲೆ ಮೊತ್ತಕ್ಕೆ ಟಿಪ್ಪು ಖಡ್ಗ ಹರಾಜು

1799ರಲ್ಲಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡಾಗ ಅನೇಕ ಶಸ್ತ್ರಗಳೊಂದಿಗೆ ಈ ಖಡ್ಗವನ್ನು ಬ್ರಿಟಿಷರು ವಶಕ್ಕೆ ತೆಗೆದುಕೊಂಡಿದ್ದರು. ಶ್ರೀರಂಗಪಟ್ಟಣದ ರಾಜಮನೆತನದ ಫೌಂಡ್ರಿಯಲ್ಲಿ ಅಹ್ಮದ್ ಪಾಲಿ ಎಂಬುವರು ತಯಾರಿಸಿದ ಕಂಚಿನ ಪಿರಂಗಿ ಈ ಹರಾಜಿನಲ್ಲಿ 2.50 ಕೋಟಿ ರೂ.ಗೆಮಾರಾಟವಾಗಿದೆ.
2005ರಲ್ಲಿ ನಡೆಸಲಾದ ಟಿಪ್ಪುವಿನ ಶಸ್ತ್ರಗಳ ಹರಾಜಿನಲ್ಲಿ 9.60 ಕೋಟಿ ರೂ. ಮೊತ್ತ ಲಭಿಸಿತ್ತು. ಈ ಬಾರಿ ನಡೆದ ಹರಾಜಿನಲ್ಲಿ 123.20 ಕೋಟಿ ರೂ. ಲಭಿಸಿದೆ. ಮದ್ಯ ದೊರೆ ವಿಜಯ ಮಲ್ಯ 2003ರಲ್ಲಿ ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ ಟಿಪ್ಪುವಿನ ಖಡ್ಗವನ್ನು 1.50 ಕೋಟಿ ರೂ.ಗೆ ಖರೀದಿಸಿದ್ದರು.
ಮೂಲ ಖಡ್ಗ ನನ್ನ ಬಳಿಯೇ ಇದೆ ಟಿಪ್ಪುವಿನ ಖಡ್ಗ ಮಾರಾಟ ಕುರಿತು ಪ್ರತಿಕ್ರಿಯಿಸಿರುವ ವಿಜಯ ಮಲ್ಯ, 'ಟಿಪ್ಪುವಿನ ಮೂಲ ಖಡ್ಗ ನನ್ನ ಬಳಿಯೇ ಇದೆ. ಅದನ್ನು ಮಾರಾಟ ಮಾಡುವ ಪ್ರಶ್ನೆಯೇ ಇಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications