ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭೂಸೇನೆಗೆ ಬೇಕು ಧಾರ್ಮಿಕ ಶಿಕ್ಷಕರು
ಗ್ರಂಥಿ ಹುದ್ದೆಗೆ ಪಂಜಾಬಿಯಲ್ಲಿ ವಿದ್ವಾನ್ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.ಮೌಲ್ವಿ ಹುದ್ದೆಗೆ ಅರೇಬಿಕ್ನಲ್ಲಿ ಮೌಲ್ವಿ ಅಲಿಂ, ಉರ್ದುವಿನಲ್ಲಿ ಅದೀಬ್ ಅಲಿಂ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು. ವಯೋಮಿತಿ 27ರಿಂದ 34 ವರ್ಷದೊಳಗಿರಬೇಕು. 160 ಸೆಂ.ಮೀ.ಎತ್ತರವಿದ್ದು, 50 ಕೆ.ಜಿ.ತೂಕ ಹೊಂದಿರಬೇಕು. ಎದೆ ಸುತ್ತಳತೆ 77 ಸೆಂ.ಮೀ.ಇರಬೇಕು.
ಆಯ್ಕೆಯಾದ ಅಭ್ಯರ್ಥಿಗಳಿಗೆ 2010ರ ಜುಲೈ 27ರಂದು ಲಿಖಿತ ಪರೀಕ್ಷೆ ನಡೆಸುವರು. ಭರ್ತಿ ಮಾಡಿದ ಅರ್ಜಿಯೊಂದಿಗೆ ಅಂಕ ಪಟ್ಟಿಗಳು, ವಾಸಸ್ಥಳ, ಜಾತಿ ಪ್ರಮಾಣ ಪತ್ರ, ನಡತೆ ಪ್ರಮಾಣ ಪತ್ರ, ಪಾಸ್ ಪೋರ್ಟ್ ಅಳತೆಯ 12 ವರ್ಣ ಭಾವಚಿತ್ರ ಲಗತ್ತಿಸಿ ಸೇನೆ ನೇಮಕಾತಿ ಕಛೇರಿ, ಕೂಲೂರು ಅಂಚೆ, ಮಂಗಳೂರು-575013 ಇವರಿಗೆ ದಿನಾಂಕ 1/5/2010ರೊಳಗೆ ಸಲ್ಲಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಯನ್ನು ಮೇಲ್ಕಂಡ ಕಛೇರಿ ಸಂಪರ್ಕಿಸಿ ಪಡೆಯಬಹುದಾಗಿದೆ.
Comments
Story first published: Friday, April 16, 2010, 11:49 [IST]