ಸಾಧ್ವಿ ಪ್ರಗ್ಯಾ ಸಿಂಗ್ ಗೆ ಹಾರ್ಟ್ ಅಟ್ಯಾಕ್
ನಾಶಿಕ್,
ಏ. 15 : ಮಾಲೇಗಾಂವ್ ಸ್ಫೋಟದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಬುಧವಾರ ತೀಕ್ಷ್ಣ ಹೃದಯಾಘಾತವಾಗಿದ್ದು, ಸದ್ಯಕ್ಕೆ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ನಾಶಿಕ್ ಸಿವಿಲ್ ಆಸ್ಪತ್ರೆ ಮೂಲಗಳು ತಿಳಿಸಿವೆ. id="toptextpromo">ಮಾಲೇಂಗಾವ್
ಸ್ಫೋಟದಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಹೊತ್ತಿರುವ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಅವರಿಗೆ ಬುಧವಾರ ರಾತ್ರಿ 11 ಗಂಟೆಗೆ ತೀಕ್ಷ್ಣ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ನಗರದ ಸೇವಾ ಸಂಘ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಅವರು ಆರೋಗ್ಯದಿಂದ ಇದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'> 2008 ಸೆಪ್ಟೆಂಬರ್ ನಲ್ಲಿ ಮಾಲೇಂಗಾಂವ್ ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್, ಮೇಜರ್ ಪ್ರಸಾದ್ ಪುರೋಹಿತ ಬಂಧಿತರಾಗಿದ್ದಾರೆ. ಅವರ ವಿರುದ್ಧ ಮೋಕಾ ಕಾಯ್ದೆಯನ್ನು ದಾಖಲಿಸಲಾಗಿದೆ. ಸದ್ಯ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಅವರನ್ನು ನಗರದ ಕೇಂದ್ರ ಜೈಲಿನಲ್ಲಿ ಇಡಲಾಗಿದೆ.











Click it and Unblock the Notifications