ಸಾಫ್ಟ್ ವೇರ್ ಸೇವೆ : ಮೈಕ್ರೋಸಾಫ್ಟ್ ಜತೆ ಇನ್ಫಿ
ಬೆಂಗಳೂರು,
ಏ. 15 : ವಿಶ್ವದಾದ್ಯಂತ ಮೈಕ್ರೋಸಾಫ್ಟ್ ನ ಆಂತರಿಕ ಮಾಹಿತಿ ತಂತ್ರಜ್ಞಾನ ಸೇವೆಯ ಹೊಣೆಯನ್ನು ಇನ್ಫೋಸಿಸ್ ನಿರ್ವಹಿಸಲಿದೆ. ಮೈಕ್ರೋಸಾಫ್ಟ್ ಜೊತೆಯಲ್ಲಿ ಮೂರು ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಇನ್ಫೋಸಿಸ್ ತಿಳಿಸಿದೆ. id="toptextpromo"> ಮೈಕ್ರೋಸಾಫ್ಟ್ ನ ಸಲ್ಯೂಷನ್ ಆದ ವಿಂಡೋಸ್ 7ಅನ್ನು ಬಳಕೆಯ ವೆಚ್ಚ ಕಡಿಮೆ ಮಾಡುವುದು. ಮಾಹಿತಿ ತಂತ್ರಜ್ಞಾನ ಅಂಶಗಳ ಬಳಕೆಯ ಸೇವೆಯ ಸರಳೀಕರಣ ಸೇರಿದಂತೆ ಅನೇಕ ನಿರ್ವಹಣೆಯನ್ನು ಇನ್ಫೋಸಿಸ್ ಮಾಡಲಿದೆ. ವಿಶ್ವದ 104 ದೇಶಗಳ 450 ಸ್ಥಳಗಳಲ್ಲಿ ಹೆಲ್ಫ್ ಡೆಸ್ಕ್ ಮೂಲಕ ಇನ್ಫೋಸಿಸ್ ತನ್ನ ಸೇವೆಯನ್ನು ಒದಗಿಸಲಿದೆ. id='are-slot-1' class='oiad oi-axt oiadv'> id='top-searched-articles'>ಮೈಕ್ರೋಸಾಫ್ಟ್
ಐಎಸ್ಓ 20000 ಅನುಷ್ಠಾನಕ್ಕಾಗಿ ಇನ್ಫೋಸಿಸ್ ಪ್ರತ್ಯೇಕವಾದ ಸೇವಾ ಕಚೇರಿ ತರೆಯಲಿದೆ. ಈ ಒಪ್ಪಂದದಿಂದಾಗಿ ಮೈಕ್ರೋಸಾಫ್ಟ್ ನ ಹೊಸ ತಂತ್ರಜ್ಞಾನದ ಅನುಷ್ಠಾನ ಮತ್ತು ನಿರ್ವಹಣೆಯ ಅವಕಾಶ ದೊರಕಿದಂತಾಗಿದೆ ಎಂದು ಇನ್ಫೋಸಿಸ್ ಹರ್ಷ ವ್ಯಕ್ತಪಡಿಸಿದೆ. ವ್ಯಾಪಾರ ವಹಿವಾಟಿನ ಬೇಡಿಕೆಯನ್ನು ಮೈಕ್ರೋಸಾಫ್ಟ್ ಜೊತೆ ನಿರ್ವಹಣೆ ಮಾಡುವ ಈ ಅವಕಾಶ ಫಲಿತಾಂಶ ಅಧರಿತವಾಗಿರುತ್ತದೆ ಎಂದು ಇನ್ಫೋಸಿಸ್ ಉತ್ತಮ ಅಮೆರಿಕದ ಉತ್ಪಾದನಾ ವಿಭಾಗದ ಮುಖ್ಯಸ್ಥ ಸಂಜಯ ಜಲೋನ್ ತಿಳಿಸಿದ್ದಾರೆ.











Click it and Unblock the Notifications