ಸಂಪರ್ಕ ಕ್ರಾಂತಿ ರೈಲ್ನಲ್ಲಿ ಬಾಂಬ್ ಪತ್ತೆ
ನವದೆಹಲಿ,
ಏ. 15 : ರಾಜಧಾನಿ ದೆಹಲಿಯಿಂದ ಹೊರಡುವ ಸಂಪರ್ಕ ಕ್ರಾಂತಿ ಏಕ್ಸ್ ಪ್ರೆಸ್ ರೈಲಿನಲ್ಲಿ ಬಾಂಬ್ ಪತ್ತೆಯಾಗಿದ್ದು, ಸುಳಿವು ಸಿಕ್ಕ ತಕ್ಷಣ ಬಾಂಬ್ ನಿಷ್ಕ್ರಿಯಗೊಳಿಸಿದ್ದರಿಂದ ಬಾರಿ ಅನಾಹುತವೊಂದನ್ನು ತಪ್ಪಿಸಿದ ಘಟನೆ ಉತ್ತರ ಪ್ರದೇಶದ ಮಹೋಬಾ ರೈಲು ನಿಲ್ದಾಣದಲ್ಲಿ ಗುರುವಾರ ನಡೆದಿದೆ. id="toptextpromo"> ಈ ಕುರಿತು ಪ್ರತಿಕ್ರಿಯೆ ನೀಡಿದ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಬ್ರಿಜ್ ಲಾಲ್, ಸಂಪರ್ಕ ಕ್ರಾಂತಿ ರೈಲಿನಲ್ಲಿ ಕೌಶಲ್ಯಾದೇವಿ ಎಂಬ ಮಹಿಳೆಯೊಬ್ಬಳ ಬ್ಯಾಗ್ ನಲ್ಲಿ ಬಾಂಬ್ ಪತ್ತೆಯಾಗಿದೆ. ಕೌಶಲ್ಯದೇವಿ ಚಿತ್ರಕೂಟದಿಂದ ಪ್ರಯಾಣ ಆರಂಭಿಸಿದ್ದಳು. id='are-slot-1' class='oiad oi-axt oiadv'> id='top-searched-articles'> ಮಹೋಬಾ ರೈಲು ನಿಲ್ದಾಣದಲ್ಲಿ ರೈಲು ನಿಂತಿದ್ದಾಗ ಈಕೆ ಶೌಚಾಲಯಕ್ಕೆ ತೆರಳುವ ಸಮಯದಲ್ಲಿ ಬಾಂಬ್ ಇರುವುದು ಗೊತ್ತಾಗಿದೆ. ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಬಾಂಬ್ ನ್ನು ನಿಷ್ಕ್ರಿಯಗೊಳಿಸಿ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಉತ್ತರ ಪ್ರದೇಶ ಪೊಲೀಸ್ ಮಹಿಳೆಯನ್ನು ಬಂಧಿಸಿದ್ದು, ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.











Click it and Unblock the Notifications