ಸ್ಪಿನ್ ಮಾಂತ್ರಿಕರ ಕದನದಲ್ಲಿ ಜಯ ಯಾರಿಗೆ?

ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ 8 ಗಂಟೆಗೆ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿದ್ದು, ಗೆದ್ದವರು ಸೆಮಿಫೈನಲ್ ತಲುಪುವ ಆಸೆ ಜೀವಂತವಾಗಿರಿಸಿಕೊಳ್ಳಲಿದ್ದಾರೆ. ಸೋತ ತಂಡ ಸೆಮಿಫೈನಲ್ ಹಾದಿಯಿಂದ ಬಹುತೇಕ ಹೊರಬಿದ್ದಂತೆಯೇ. ಉಭಯ ತಂಡಗಳು ತಲಾ 12 ಪಂದ್ಯ ಗಳಿಂದ ತಲಾ 12 ಅಂಕ ಸಂಪಾದಿಸಿವೆ. ಆದರೆ ರನ್ ಗಳಿಕೆ ಸರಾಸರಿಯಲ್ಲಿ ಬೆಂಗಳೂರು ತಂಡವೇ ರಾಜಸ್ಥಾನ್ ಗಿಂತಲೂ ಉತ್ತಮ ಸ್ಥಾನ ಹೊಂದಿದೆ.
ಅಂಕಪಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ
ಐಪಿಎಲ್ 3 ಪಂದ್ಯಗಳ ಪಟ್ಟಿ
ಚಾಲೆಂಜರ್ಸ್ vs ಚಾರ್ಜರ್ಸ್ : ಕನ್ನಡದಲ್ಲಿ ಸ್ಕೋರ್
ಸಂಘಟಿತ ಹೋರಾಟಕ್ಕೆ ಹೆಸರುವಾಸಿಯಾದ ರಾಜಸ್ಥಾನ ತಂಡಕ್ಕೆ ಕೋಚ್ ಸಹ ಆಗಿರುವ ನಾಯಕ ಶೇನ್ ವಾರ್ನ್, ಅಚ್ಚರಿ ಫಲಿತಾಂಶ ನೀಡುವ ಹುಮ್ಮಸ್ಸಿನಲ್ಲಿದ್ದಾರೆ. ಡೆಕ್ಕನ್ ವಿರುದ್ಧದ ಕಳೆದ ಪಂದ್ಯದಲ್ಲಿ ಸೋಲುಂಡ ಆರ್ ಸಿಬಿ, ಮತ್ತೆ ಗರಿಗೆದರಿ ಹೋರಾಡ ಬೇಕಿದೆ. ನಾಯಕ ಅನಿಲ್ ಕುಂಬ್ಳೆ ನೇತೃತ್ವದ ಬೌಲಿಂಗ್ ಪಡೆ ಯೂಸಫ್ ಪಠಾಣ್ ಸೇರಿದಂತೆ ಯಾವುದೇ ಸಮರ್ಥ ಬ್ಯಾಟ್ಸ್ ಮನ್ಸ್ ಗಳ ಪಡೆಯನ್ನು ಕಟ್ಟಿ ಹಾಕುವ ಸಾಮರ್ಥ್ಯ ಹೊಂದಿದೆ. ಮೇಲ್ನೋಟಕ್ಕೆ ಆರ್ ಸಿಬಿ ಬ್ಯಾಟಿಂಗ್ ನಲ್ಲಿ ರಾಜಸ್ಥಾನ್ ತಂಡಕ್ಕಿಂತ ಬಲಿಷ್ಠವಾಗಿದೆ. ಆದರೆ, ನಿರ್ಣಾಯಕ ಹಂತದಲ್ಲಿ ತಾಳ್ಮೆ ಕಳೆದುಕೊಳ್ಳದೆ ಆಡುವ ಜಾಣ್ಮೆಯ ಮೇಲೆ ಪಂದ್ಯದ ದಿಕ್ಕು ದೆಸೆ ನಿರ್ಧಾರವಾಗಲಿದೆ.












Click it and Unblock the Notifications