ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30 ಸಾವಿರ ಟೆಕ್ಕಿಗಳಿಗೆ ಇನ್ಫಿ ಗಾಳ!

By Mahesh
|
Google Oneindia Kannada News

Infosys HR TV Mohandas Pai
ಬೆಂಗಳೂರು, ಏ.14: ಮುಂದಿನ 12 ತಿಂಗಳಿನಲ್ಲಿ 30 ಸಾವಿರ ಮಂದಿ ಯನ್ನು ನೇಮಕ ಮಾಡಿಕೊಳ್ಳುವುದಾಗಿ ಬೆಂಗಳೂರು ಮೂಲದ ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಟೆಕ್ನಾಲಜೀಸ್ ಮಂಗಳವಾರ ಪ್ರಕಟಣೆ ನೀಡಿದೆ. ಕಂಪನಿಯು ನಾಲ್ಕನೇ ತೈಮಾಸಿಕ ವರದಿಯನ್ನು ಮಂಗಳವಾರ ಪ್ರಕಟಿಸಿದ್ದು, 1,617 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.

ಭಾರತದಲ್ಲಿ ಈಗಾಗಲೇ 19,000 ಕ್ಯಾಂಪಸ್ ಆಫರ್‌ಗಳನ್ನು ನೀಡಲಾಗಿದೆ ಎಂದು ಕಂಪನಿಯ ಮಾನವ ಸಂಪನ್ಮೂಲ ಮತ್ತು ಶಿಕ್ಷಣ, ಸಂಶೋಧನೆ ವಿಭಾಗದ ಮುಖ್ಯಸ್ಥ ಟಿ.ವಿ ಮೋಹನ್‌ದಾಸ್ ಪೈ ಹೇಳಿದರು. ಚೀನಾ ಹಾಗೂ ಅಮೆರಿಕದಲ್ಲಿರುವ ಕಚೇರಿಗೆ ತಲಾ 1 ಸಾವಿರ ಹುದ್ದೆಗಳ ನೇಮಕ ನಡೆಯಲಿದೆ. ಮನೀಲಾ ಕಚೇರಿಗೆ 400 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. ಮಧ್ಯಮ ಮತ್ತು ಕಿರಿಯ ಹಂತದ ಸಿಬ್ಬಂದಿಗೆ ಬಹಳಷ್ಟು ವೇತನ ಹೆಚ್ಚಳ ಮಾಡಲಾಗಿದೆ.

ಹಿರಿಯರ ಮಟ್ಟದಲ್ಲಿ ಶೇ.10ರಷ್ಟು ಏರಿಕೆ ಮಾಡಲಾಗಿದೆ. ಒಟ್ಟಾರೆ ವೇತನ ಏರಿಕೆ ಶೇ.14-17ರಷ್ಟಿದೆ ಎಂದು ತಿಳಿಸಿದರು. ಸುಮಾರು 7,500 ಉದ್ಯೋಗಿಗಳಿಗೆ ಬಡ್ತಿ ಸಿಕ್ಕಿದೆ ಎಂದರು.ಕಳೆದ ಮಾರ್ಚ್31ರ ವೇಳೆಗೆ ಸಾಫ್ಟ್‌ವೇರ್ ಸೇವೆ, ಉತ್ಪನ್ನ ಮತ್ತು ಬಿಸಿನೆಸ್ ಪ್ರಕ್ರಿಯೆ ನಿರ್ವಹಣೆ ವಿಭಾಗದಿಂದ 5,944 ಕೋಟಿ ರೂ ಆದಾಯ ಸಿಕ್ಕಿದೆ. ಕಂಪನಿಯ ನಗದು ಮತ್ತು ನಗದು ಸಮಾನ ಸಂಪತ್ತಿನ ಮೊತ್ತ 3.5 ಶತಕೋಟಿ ಡಾಲರ್ ಆಗಿದೆ.

'ಉದ್ಯಮದ ಸಂಕಷ್ಟ ದಿನಗಳಲ್ಲಿ ನಾವು ಉತ್ತಮ ಪ್ರದರ್ಶನವನ್ನು ಕಾಯ್ದುಕೊಂಡಿದ್ದೇವೆ. ಸದ್ಯದ ಪರಿಸ್ಥಿತಿ ಉದ್ಯಮಕ್ಕೆ ಕಳವಳಕಾರಿಯಾಗಿದೆ. ಆದರೆ ಇದರ ಪರಿಣಾಮವನ್ನು ಕಂಪನಿಯ ಆದಾಯದ ಮೇಲೆ ಬೀರದಂತೆ ನೋಡಿಕೊಳ್ಳುತ್ತಿದ್ದೇವೆ' ಎಂದು ಇನ್ಫೋಸಿಸ್ ಸಿಎಫ್‌ಒ ವಿ. ಬಾಲಕೃಷ್ಣನ್ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X