ಹಳ್ಳಿಮನೆ ಹೋಟೆಲ್ ನಲ್ಲಿ ಬೆಂಕಿ ಆಕಸ್ಮಿಕ
ಬೆಂಗಳೂರು,
ಏ. 14 : ನಗರದ ಜನಪ್ರಿಯ ಹೋಟೆಲ್ ಗಳಲ್ಲಿ ಒಂದಾಗಿರುವ ಹಳ್ಳಿಮನೆ ಹೋಟೆಲ್ ನ ಮೂರನೇ ಮಹಡಿಯಲ್ಲಿ ಇಂದು ಮಧ್ಯಾಹ್ನ ಆಕಸ್ಮಿಕ ಬೆಂಕಿ ದುರಂತ ಸಂಭವಿಸಿದೆ. id="toptextpromo">ಮೂರನೇ
ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಭಯಭೀತರಾದ ಗ್ರಾಹಕರು ಹೊರಗೆ ಬಂದಿದ್ದಾರೆ. ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಚಿಮಣಿಯಲ್ಲಿ ಬೆಂಕಿ ಕಾಣಿಸಿಕೊಂಡು ಇದು ಇತರೆಡೆಯಲ್ಲಿಯೂ ಹಬ್ಬಿತು. ಅಗ್ನಿ ಶಾಮಕ ದಳ ಸಕಾಲಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದೆ. id='are-slot-1' class='oiad oi-axt oiadv'> id='top-searched-articles'> ಕೆಲವೇ ದಿನಗಳ ಹಿಂದೆ ಹಳೆ ಏರ್ ಫೋರ್ಟ್ ರಸ್ತೆಯಲ್ಲಿರುವ ಕಾರ್ಲಟನ್ ಕಟ್ಟಡದಲ್ಲಿ ಬೆಂಕಿ ದುರಂತ ಸಂಭವಿಸಿ 9 ಮಂದಿ ಮೃತಪಟ್ಟಿದ್ದರು. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ನಂತರ ರೆಸಿಜೆನ್ಸಿ ರಸ್ತೆಯಲ್ಲಿನ ಗೋಲ್ಡನ್ ಟವರ್ ನಲ್ಲಿ ಬೆಂಕಿ ಆಕಸ್ಮಿಕದಿಂದ ಲಕ್ಷಾಂತರ ಮೌಲ್ಯದ ಆಸ್ತಿ ಸುಟ್ಟು ಕರಕಲಾಗಿತ್ತು. ಇದರ ಬೆನ್ನಲ್ಲೆ ಇಂದು ಮಲ್ಲೇಶ್ವರಂ ನಲ್ಲಿರುವ ಹಳ್ಳಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.











Click it and Unblock the Notifications