ಮತ್ತೆ ಹಸೆಮಣೆಗೇರಲಿರುವ ಕೇಂದ್ರ ಮಂತ್ರಿ!
ನವದೆಹಲಿ,
ಏ. 12 : ಸದಾ ಒಂದಲ್ಲ ಒಂದು ವಿವಾದದ ಮೂಲಕ ಸುದ್ದಿ ಮಾಡುತ್ತಿರುವ ಕೇಂದ್ರದ ವಿದೇಶಾಂಗ ಖಾತೆ ರಾಜ್ಯ ಸಚಿವ ಶಶಿ ತರೂರ್(54) ಈ ಬಾರಿ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಬ್ರೇಕಿಂಗ್ ನ್ಯೂಸ್ ಆಗಿ ಹೊರಹೊಮ್ಮಿದ್ದಾರೆ. ಎರಡನೇ ಪತ್ನಿಗೆ ವಿಚ್ಛೇದನ ನೀಡಿರುವ ತರೂರ್ ಮೂರನೇ ಪತ್ನಿ ಕೈಹಿಡಿಯಲು ತಯಾರಿ ನಡೆಸಿರುವುದೇ ರಾಷ್ಟ್ರೀಯ ಚಾನೆಲ್ ನಲ್ಲಿ ಹೆಡ್ ಲೈನ್ಸ್ ಆಗಿ ಪ್ರಸಾರವಾಗುತ್ತಿದೆ. id="toptextpromo"> ಕಾಶ್ಮೀರ ಮೂಲದ ಸೌಂದರ್ಯ ತಜ್ಞೆ ಸುನಂದಾ ಎಂಬುವವರನ್ನು ಶಶಿ ತರೂರ್ ವಿವಾಹವಾಗಲು ನಿರ್ಧರಿಸಿದ್ದಾರೆ. ಸುನಂದಾ ಅವರು ಈ ಮೊದಲು ದುಬೈನಲ್ಲಿ ನೆಲೆಸಿದ್ದರು. ಎರಡನೇ ಪತ್ನಿ ಕೆನಡಾ ಮೂಲದ ಅಧಿಕಾರಿ ಕ್ರಿಸ್ತಾ ಗಿಲೆಸ್ ಅವರಿಗೆ ಅಧಿಕೃತ ವಿಚ್ಛೇದನ ನೀಡುವ ಸಿದ್ಧತೆ ನಡೆಸಿದ್ದಾರೆ. ವಿಶ್ವಸಂಸ್ಥೆಯ ನಿಶ್ಯಸ್ತ್ರೀಕರಣದ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಕ್ರಿಸ್ತಾ ಗಿಲೆಸ್ ಅವರೊಂದಿಗೆ ವಿವಾಹ ಬಂಧನವನ್ನು ಕಡಿದುಕೊಳ್ಳಲು ತರೂರ್ ನಿರ್ಧರಿಸಿದ್ದು, ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. id='are-slot-1' class='oiad oi-axt oiadv'> id='top-searched-articles'> ಕೊಲ್ಕತ್ತಾದ ತಮ್ಮ ಶಾಲಾ ದಿನಗಳಲ್ಲಿ ಪರಿಚಿತರಾಗಿದ್ದ ವಿದೇಶಿ ವಿವಿಗಳಲ್ಲಿ ಗೌರವ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ತಿಲೋತ್ತಮ ಮುಟರ್ಜಿ ಅವರು ಶಶಿ ತರೂರ್ ಅವರ ಮೊದಲ ಪತ್ನಿ. ಈ ಮದುವೆಯಿಂದ ಅವರು ಅವಳಿ ಮಕ್ಕಳನ್ನೂ ಹೊಂದಿದ್ದಾರೆ. ಈ ಬಗ್ಗೆ ತರೂರ್ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಮಾಧ್ಯಮಗಳು ಅವರ ಖಾಸಗಿತನವನ್ನು ಗೌರವಿಸಬೇಕು ಎಂದು ಅವರ ಆಪ್ತರು ಸಲಹೆ ನೀಡಿದ್ದಾರೆ. ಈ ಮೊದಲು ಶಶಿ ತರೂರ್ ಅವರು ಟ್ವಿಟ್ಟರ್ ಪೇಜ್ ಮೂಲಕ ಅನೇಕ ವಿವಾದಗಳನ್ನು ಸೃಷ್ಟಿಸಿಕೊಂಡಿದ್ದರು.











Click it and Unblock the Notifications