ಬಳ್ಳಾರಿಯಲ್ಲಿ ಕಲ್ಲು ಕರುಗುವಷ್ಟು ತಾಪಮಾನ

Sweltering 43 degrees celsius in Bellary
ಬಳ್ಳಾರಿ, ಏ.10: ಬಳ್ಳಾರಿಯಲ್ಲಿ ಕಲ್ಲು ಕರಗುವಷ್ಟು ತಾಪಮಾನ. ಇಲ್ಲಿನ ತಾಪಮಾನ 43 ಡಿಗ್ರಿ ಸೆಲ್ಸಿಯಸ್ ನಷ್ಟಿದ್ದು ನಾಗರಿಕರು ಹೈರಾಣಾಗಿದ್ದಾರೆ. ಸಾಲದಕ್ಕೆ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದ್ದು ಅತ್ತ ಮನೆಯಲ್ಲಿ ಇತ್ತ ಹೊರಬರಲು ಆಗದಂತಹ ಪರಿಸ್ಥಿತಿ ತಲೆದೋರಿದೆ.

ಪವರ್ ಕಟ್ ವಿರುದ್ಧ ಬಳ್ಳಾರಿ ನಾಗರಿಕರ ಸಹನೆ ನಶಿಸಿದ್ದ್ದು ಶೀಘ್ರ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಮೊರೆ ಹೋಗಿದ್ದಾರೆ. ಆದರೆ ಅಧಿಕಾರಿಗಳ ಜಾಣ ಕಿವುಡುತನ ಪ್ರದರ್ಶಿಸುತ್ತಿದ್ದಾರೆ. ಬಳ್ಳಾರಿಯಲ್ಲಿ ಸಮಸ್ಯೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ.ಇಲ್ಲಿನ ನಾಗರಿಕರ ಸಂಕಷ್ಟ ಹೇಳತೀರದಾಗಿದೆ.

220 ಕಿಲೋ ವ್ಯಾಟ್ ಸಾಮರ್ಥ್ಯದ ಬಳ್ಳಾರಿಯ ಅಲಿಪುರ್ ವಿದ್ಯುತ್ ಘಟಕ ತನ್ನ ಸಾಮರ್ಥ್ಯವನ್ನು ಕಳೆದುಕೊಂಡಿದ್ದು ಅರ್ಧದಷ್ಟು ವಿದ್ಯುತ್ತನ್ನು ಸರಬರಾಜು ಮಾಡುತ್ತಿದೆ. ಇದರಿಂದ ಬಳ್ಳಾರಿಗೆ ಸರಬರಾಜಾಗುವ ವಿದ್ಯುತ್ ಪ್ರಮಾಣವನ್ನು ಖೋತಾ ಮಾಡಲಾಗಿದೆ. ಬೇಡಿಕೆಗೆ ತಕ್ಕಂತೆ ವಿದ್ಯುತ್ತನ್ನು ಸರಬರಾಜು ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಸಹ ಕೈಚೆಲ್ಲಿದೆ. ಬಳ್ಳಾರಿ ನಾಗರಿಕರನ್ನು ಸಂಭಾಳಿಸುವುದು ಅಧಿಕಾರಿಗಳಿಗೂ ಕಷ್ಟಕರವಾಗಿ ಪರಿಣಮಿಸಿದೆ. ಹೆಚ್ಚುವರಿ ವಿದ್ಯುತ್ ಸರಬರಾಜು ಮಾಡುವಂತೆ ಬಳ್ಳಾರಿ ಮುಖ್ಯ ಇಂಜಿನಿಯರ್ ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿಯಾಗಿದ್ದಾಗಿ ತಿಳಿದುಬಂದಿದೆ. ಒಟ್ಟಿನಲ್ಲಿ ಬಳ್ಳಾರಿ ನಾಗರಿಕ ಸಮಸ್ಯೆ ಯಾವಾಗ ಪರಿಹಾರ ಕಾಣುತ್ತದೊ ಆ ದೇವರ ಬಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+