ಪುಣೆಯಲ್ಲಿ ಯುವತಿಯ ಮೇಲೆ ಜವಾನರ ಅತ್ಯಾಚಾರ

ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಂಗ್ವಿ ಪ್ರದೇಶದಲ್ಲಿ ಏಪ್ರಿಲ್ 7ರ ರಾತ್ರಿ ಜವಾನರಿಬ್ಬರು ಅತ್ಯಾಚಾರವೆಸಗಿದ್ದಾರೆ. ಅವರಿಬ್ಬರನ್ನು ರಜನೀಶ್ ಕುಮಾರ್ ಸುರೇಶ್ ಚಂದ್ರ ಮತ್ತು ಸಮಿಂದರ್ ಸಿಂಗ್ ನೇಪಾಳಿ ಎಂದು ಗುರುತಿಸಲಾಗಿದೆ. ಇಬ್ಬರನ್ನು ಬಂಧಿಸಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಾದಿದೆ.
ಕಾಲೇಜು ವಿದ್ಯಾರ್ಥಿನಿ ತನ್ನ ಗೆಳೆಯನೊಂದಿಗೆ ಕುಳಿತಿದ್ದಾಗ ಮೊದಲು ಗೆಳೆಯನನ್ನು ಜವಾನರು ಹೊಡೆದಿದ್ದಾರೆ. ನಂತರ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಅವಳ ಮೊಬೈಲನ್ನು ಕಸಿದುಕೊಂಡು ಮಾರನೇ ದಿನ ಬರಲು ಹೇಳಿದ್ದಾರೆ. ಮಾರನೇ ದಿನ ಜವಾನರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಲಾಗಿದ್ದು, ವರದಿ ಇನ್ನೂ ಬರಬೇಕಿದೆ.
ಒಂದು ವಾರದಲ್ಲೇ ಪುಣೆಯಲ್ಲಿ ನಡೆದಿರುವ ಎರಡನೇ ಅತ್ಯಾಚಾರ ಪ್ರಕರಣ ಇದು. ಕೆಲ ದಿನಗಳ ಹಿಂದೆ ಎಂಬಿಎ ಪದವೀಧರೆಯನ್ನು ಮೂವರು ಯುವಕರು ಕಾರಿನಲ್ಲಿ ಸುತ್ತಿಸುತ್ತಲೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದರು. ಈ ಅತ್ಯಾಚಾರ ಪ್ರಕರಣಗಳಿಂದಾಗಿ ಏಕಾಂಗಿಯಾಗಿ ಸಂಚರಿಸುವ ಮಹಿಳೆಯರಿಗೆ ಪುಣೆ ಅಸುರಕ್ಷಿತ ನಗರವಾಗಿ ಪರಿಣಮಿಸುತ್ತಿದೆ.











Click it and Unblock the Notifications