ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ನಂ.1
ಚಿತ್ರದುರ್ಗ,ಏ.7:
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರವು ಅತ್ಯುತ್ತಮ ಪ್ರಶಸ್ತಿ ನೀಡಿ ಒಂದು ಲಕ್ಷ ರೂ.ಗಳ ನಗದು ಬಹುಮಾನವನ್ನು ನೀಡಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕಡಾ.ಶಂಕರಪ್ಪ ತಿಳಿಸಿದರು. ಜಿಲ್ಲಾ ಆಸ್ಪತ್ರೆಯು ಸ್ವಾತಂತ್ರ್ಯಪೂರ್ವ 1926 ರಲ್ಲಿ ಪ್ರಾರಂಭಗೊಂಡು 1951 ರಿಂದ ಈಗಿನ ಆಸ್ಪತ್ರೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತ ಬಂದಿದೆ. ಆಸ್ಪತ್ರೆಯಲ್ಲಿ 450 ಹಾಸಿಗೆ ಸಾಮರ್ಥ್ಯವಿದ್ದು 27 ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. id="toptextpromo">ಆಸ್ಪತ್ರೆಯಲ್ಲಿ
ತುರ್ತು ಚಿಕಿತ್ಸಾ ಘಟಕ, ಟೆಲಿಮೆಡಿಸನ್, ರಕ್ತನಿಧಿ ಕೇಂದ್ರ, ಆರ್.ಡಿ.ಎಲ್, ಡಯಾಲಿಸಿಸ್, ಆಯುಷ್ ಮತ್ತು ಎ.ಆರ್.ಟಿ ಕೇಂದ್ರಗಳಿದ್ದು ಎಲ್ಲಾ ಜನರ ಅವಶ್ಯಕತೆಗೆ ತಕ್ಕಂತೆ ಸೇವೆ ಒದಗಿಸಲಾಗಿದೆ. ವಿಶೇಷವಾಗಿ ಡಯಾಲಿಸಿಸ್ ಹಾಗೂ ಎ.ಆರ್.ಟಿ ಕೇಂದ್ರಗಳು ಸಾರ್ವಜನಿಕರಿಗೆ ಅತ್ಯಂತ ಉಪಯುಕ್ತವಾದ ಸೇವೆ ಒದಗಿಸುತ್ತಿವೆ. ಮೇಲಿನ ಎಲ್ಲಾ ಸೇವೆಗಳನ್ನು ಗಮನಿಸಿ ರಾಜ್ಯ ಸರ್ಕಾರವು ಜಿಲ್ಲಾ ಆಸ್ಪತ್ರೆಗೆ ಅತ್ಯುತ್ತಮ ಪ್ರಶಸ್ತಿಯನ್ನು ನೀಡಿದೆ. id='are-slot-1' class='oiad oi-axt oiadv'> id='top-searched-articles'>ಇಷ್ಟರಲ್ಲಿಯೆ
ಟ್ರಾಮಾ ಕೇರ್ ಸೆಂಟರ್ ಪ್ರಾರಂಭ ಮಾಡಲಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಒದಗಿಸುವ ಸುಸಜ್ಜಿತವಾದ ಆಸ್ಪತ್ರೆಯಾಗಲಿದೆ. ಅತ್ಯುತ್ತಮ ಪ್ರಶಸ್ತಿ ಪಡೆಯಲು ಎಲ್ಲಾ ರೀತಿಯಿಂದ ಪೋತ್ಸಾಹಿಸಿದ ಜಿಲ್ಲಾ ಆಡಳಿತ ಮತ್ತು ಆಸ್ಪತ್ರೆಯ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಯವರಿಗೆ ಮತ್ತು ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಜಿಲ್ಲಾ ಸರ್ಜನ್‌ರವರು ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ಆಸ್ಪತ್ರೆಗೆ ಐ.ಎಸ್.ಓ 9001-2000 ಪ್ರಶಸ್ತಿಯನ್ನು 2003 ರಲ್ಲಿ ನೀಡಲಾಗಿತ್ತು ಎಂದು ಅವರು ತಿಳಿಸಿದರು.











Click it and Unblock the Notifications