ಬಿಬಿಎಂಪಿ ಚುನಾವಣೆ : ಮತಎಣಿಕೆ ಆರಂಭ
ಬೆಂಗಳೂರು,
ಏ. 5 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಡೆದ ಪ್ರಪ್ರಥಮ ಚುನಾವಣೆಯ ಫಲಿತಾಂಶ ಏಪ್ರಿಲ್ 5ರ ಸೋಮವಾರ ಪ್ರಕಟವಾಗಲಿದೆ. ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬೆಂಗಳೂರಿನ ಚುಕ್ಕಾಣಿ ಹಿಡಿಯಲು ತುದಿಗಾಲಲ್ಲಿ ನಿಂತಿವೆ. id="toptextpromo">ಜೊತೆಗೆ
ಈ ಚುನಾವಣೆ ಕೂಡ ಬೆಂಗಳೂರು ಮಹಾನಗರದ ಜನತೆಗೆ ಕೂಡ ಅತ್ಯಂತ ಮಹತ್ವದ ಚುನಾವಣೆಯಾಗಿತ್ತು. ಮೂಲಸೌಕರ್ಯಗಳಿಂದ ವಂಚಿತವಾಗಿರುವ ಜನತೆಗೆ ಸೌಕರ್ಯಗಳನ್ನು ದಕ್ಕಿಸಿಕೊಳ್ಳಲು ಈ ಚುನಾವಣೆ ಅಗತ್ಯವಾಗಿತ್ತು. ವಿಪರ್ಯಾಸವೆಂಬಂತೆ ಮಹತ್ವದ ಮತದಾನದ ದಿನ ಬೆಂಗಳೂರಿನ ಜನತೆಯೇ ಮತ ಹಾಕುವಲ್ಲಿ ಅಷ್ಟೊಂದು ಆಸಕ್ತಿ ತೋರಿರಲಿಲ್ಲಿ. ಒಟ್ಟಾರೆ ಪ್ರತಿಶತ 44ರಷ್ಟು ಮಾತ್ರ ಮತದಾನವಾಗಿ ಬೆಂಗಳೂರಿರ ನಿರ್ಲಕ್ಷತೆಗೆ ಕನ್ನಡಿ ಹಿಡಿದಿತ್ತು. ಏನೇ ಆದರೂ, ಆಯ್ಕೆಯಾದ ಪ್ರತಿನಿಧಿಯಿಂದ ಕೆಲಸ ತೆಗೆದುಕೊಳ್ಳುವ ಗುರುತರ ಜವಾಬ್ದಾರಿ ಇನ್ನು ಬೆಂಗಳೂರಿನ ನಾಗರಿಕರ ಮೇಲಿದೆ. id='are-slot-1' class='oiad oi-axt oiadv'> id='top-searched-articles'>ನಗರದ
28 ಕೇಂದ್ರಗಳಲ್ಲಿ ಮತ ಎಣಿಕೆ ಈಗಾಗಲೆ ಪ್ರಾರಂಭವಾಗಿದೆ. 198 ವಾರ್ಡುಗಳಲ್ಲಿ ನಿಂತಿದ್ದ ಅಭ್ಯರ್ಥಿಗಳ ಹಣೆಬರಹ ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ. ಒಟ್ಟು ನಾಲ್ಕು ಹಂತಗಳಲ್ಲಿ ಮತಎಣಿಕೆ ನಡೆಯಲಿದೆ. ಮಧ್ಯಾಹ್ನ 12ರ ಹೊತ್ತಿಗೆ ಸಂಪೂರ್ಣ ಚಿತ್ರಣ ದೊರೆಯಲಿದೆ.











Click it and Unblock the Notifications