ಸಾನಿಯಾ ಭಾರತದ ಪರ ಆಡಲಿದ್ದಾಳೆ : ಮಲ್ಲಿಕ್

Shoaim Mallik speaks to press in Hyderabad
ಹೈದರಾಬಾದ್, ಏ. 4 : ಸಾನಿಯಾ ನನ್ನ ಮೊದಲ ಪತ್ನಿ. ನನ್ನ ಅವಳ ಮದುವೆ ಹೈದರಾಬಾದಿನಲ್ಲಿ ಏಪ್ರಿಲ್ 15 ರಂದು ನಡೆಯಲಿದೆ ಎಂದು ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯೆಬ್ ಮಲ್ಲಿಕ್ ಇಂದು ಇಲ್ಲಿ ಸಾರಿ ಹೇಳಿದರು. ಮದುವೆಯಾದ ನಂತರವೂ ಸಾನಿಯಾ ಭಾರತದ ಪರವಾಗಿ ಟೆನ್ನಿಸ್ ಆಡಲಿದ್ದಾರೆಂದು ದೃಢಪಡಿಸಿದರು.

ಹಲವು ಬಗೆಯ ವಿವಾದಗಳಿಗೆ ಸಾಮಗ್ರಿ ಒದಗಿಸಿರುವ ಸಾನಿಯ ಶೊಯೇಬ್ ಮದುವೆ ಕುರಿತಂತೆ ಇದೇ ಮೊದಲಬಾರಿಗೆ ಮಲ್ಲಿಕ್ ಭಾನುವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹಲವು ವಿಷಯಗಳನ್ನು ಸ್ಪಷ್ಟಪಡಿಸಿದರು.

ನನ್ನ ಹಿನ್ನೆಲೆ, ಅಯೇಶಾ ಸಿದ್ದಿಕಿ ಜತೆಗಿನ ಸಂಬಂಧ ಎಲ್ಲವು ಸಾನಿಯಾಗೆ ಗೊತ್ತಿದೆ. ನಮ್ಮೀರ್ವರ ನಡುವೆ ಈ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅಯೇಶಾ ಅವರ ತಾಯಿ ಎತ್ತಿರುವ ಕಾನೂನು ವಿಷಯಗಳ ಬಗೆಗೆ ಸೂಕ್ತ ಉತ್ತರ ನೀಡುತ್ತೇನೆ. ಅದಕ್ಕೆ ವಕೀಲರ ನೆರವನ್ನೂ ಪಡೆದಿದ್ದೇನೆ ಎಂದು ಮಲ್ಲಿಕ್ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

ಅಯೇಶಾ ಸಿದ್ದಿಕಿ ಬಹಿರಂಗಪಡಿಸಿರುವ ನಿಖಾನಾಮಾಕ್ಕೆ (ಮದುವೆ ಕರಾರು ಪತ್ರ) ತಾವು ಸಹಿ ಹಾಕಿರುವುದನ್ನು ಮಲ್ಲಿಕ್ ಒಪ್ಪಿಕೊಂಡರು. ತಮ್ಮ ಮತ್ತು ಅಯೇಶಾ ನಡುವೆ ನಿಖ್ ನಾಮಾ ನೆರವೇರಿದ್ದು ನಿಜ. ಅದಕ್ಕೆ ನಾನು ಸಹಿ ಹಾಕಿದ್ದೂ ನಿಜ. ಆದರೆ ನಿಖಾ ಸಮಯದಲ್ಲಿ ನನಗೆ ತೋರಿಸಿದ ಹುಡುಗಿ ಫೋಟೋನೇ ಬೇರೆ ಅಯೇಶಾನೇ ಬೇರೆ ಎಂದು ಮಲ್ಲಿಕ್ ವಾದಿಸಿದರು.

ಶೋಯೆಬ್ ಪರ ವಕೀಲ ರಮೇಶ್ ಗುಪ್ತಾ ಪ್ರಕಾರ ಮದುವೆ ಪ್ರಸ್ತಾಪ ನಡೆಯುತ್ತಿರುವಾಗ ಮಲ್ಲಿಕ್ ಗೆ ತೋರಿಸಿಲಾದ ಹುಡುಗಿಯ ಭಾವಚಿತ್ರ ಅಯೇಶಾಳದ್ದಲ್ಲ, ಅದು ಬೇರೆ ಯಾರದ್ದೋ ಚಿತ್ರ. ಈಗ ಅಯೇಶಾ ಸಿದ್ದಿಕಿ ಕುಟುಂಬದವರು ಏನೇ ಆಪಾದನೆ ಮಾಡಿದರೂ ವ್ಯರ್ಥ. ಕಾನೂನು ಪ್ರಕಾರ ಅವರ ವಾದ ನಿಲ್ಲುವುದಿಲ್ಲ. ಏಕೆಂದರೆ, ಮುಸ್ಲಿಂ ಧರ್ಮದ ಪ್ರಕಾರ ಗಂಡಸು ಒಂದಕ್ಕಿಂತ ಹೆಚ್ಚು ಮದುವೆ ಆಗುವುದಕ್ಕೆ ಅವಕಾಶವಿದೆ. ಇನ್ನೊಂದು ಮದುವೆ ಆಗುವಾಗ ಮೊದಲ ಹೆಂಡತಿಯ ಪರ್ಮಿಷನ್ ಅಗತ್ಯವಿಲ್ಲ ಎಂದೂ ವಕೀಲ ರಮೇಶ್ ಪ್ರತಿಪಾದಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+