ಸಾನಿಯಾ, ಮಲಿಕ್ ಮದುವೆಗೆ ಮುತಾಲಿಕ್ ಆಕ್ರೋಶ

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮುತಾಲಿಕ್, ಮುಂದಿನ ಪಂದ್ಯಗಳಲ್ಲಿ ಸಾನಿಯಾ ಭಾರತವನ್ನು ಪ್ರತಿನಿಧಿಸದಂತೆ ನಿಷೇಧಿಸಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸುವುದಾಗಿ ತಿಳಿಸಿದ್ದಾರೆ. ಭಾರತದ 100 ಕೋಟಿ ಮಂದಿಯಲ್ಲಿ ಸಾನಿಯಾಗೆ ಮದುವೆಯಾಗಲು ಯಾರು ಸಿಗಲಿಲ್ಲವೆ? ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ.
ಮುಸ್ಲಿಂ ಸಮುದಾಯದಲ್ಲೆ ಇರುವ ಭಾರತೀಯ ಯುವಕನನ್ನು ಸಾನಿಯಾ ಮದುವೆಯಾಗಬಹುದಿತ್ತು. ನಮ್ಮ ದೇಶದಲ್ಲಿ ಹುಟ್ಟಿ ಬೆಳೆದು ಶತ್ರು ದೇಶದ ಆಟಗಾರರನನ್ನು ಮದುವೆಯಾಗುತ್ತಿರುವುದು ಸರಿಯಲ್ಲ ಎಂದು ಮುತಾಲಿಕ್ ತಿಳಿಸಿದ್ದಾರೆ.
ಶೋಯಬ್ ನನ್ನು ಮದುವೆಯಾದ ಬಳಿಕ ಪಾಕಿಸ್ತಾನದ ಪರ ಆಡುವುದಾಗಿ ಸಾನಿಯಾ ಹೇಳಿರುವುದು ಸರಿಯಲ್ಲ. ಭಾರತೀಯರಿಗೆ ಸಾನಿಯಾ ಮಾಡಿದ ಅಪಮಾನ ಇದು ಎಂದು ಮುತಾಲಿಕ್ ಕಿಡಿಕಾರಿದ್ದಾರೆ. ಶೋಯಬ್ ನನ್ನು ಮದುವೆಯಾದ ಬಳಿಕ ಭಾರತದ ಪರ ಆಡದಂತೆ ಸಾನಿಯಾಗೆ ಅವಕಾಶ ನೀಡಬಾರದು. ಅವರ ಸದಸ್ಯತ್ವ ರದ್ದುಪಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಮುತಾಲಿಕ್ ಎಚ್ಚರಿಸಿದ್ದಾರೆ.












Click it and Unblock the Notifications