ಏ.6 ರಿಂದ ವರ್ಗಾವರ್ಗಿ ಶುರು..?
ಬೆಂಗಳೂರು,
ಮಾ. 30 : ಪ್ರಸಕ್ತ ವರ್ಷ ರಾಜ್ಯ ಸರಕಾರಿ ನೌಕರರ ಸಾಮೂಹಿಕ ವರ್ಗಾವಣೆ ಪ್ರಕ್ರಿಯೆಗೆ ಕೈ ಹಾಕಲು ಸರಕಾರ ನಿರ್ಧರಿಸಿದ್ದು, ವರ್ಗಾವರ್ಗಿಯನ್ನು ಸಂಬಂಧಪಟ್ಟ ಸಚಿವರಿಗೆ ನೀಡಿದೆ. id="toptextpromo">ಸೋಮವಾರ
ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಸಚಿವರ ಅನುಮೋದನೆ ಮೇರೆಗೆ ವರ್ಗಾವಣೆ ಮಾಡಲು ಅವಕಾಶ ಕೊಟ್ಟಿದೆ. ಎಲ್ಲ ವರ್ಗಾವಣೆ ಪ್ರಕ್ರಿಯೆಯನ್ನು ತಿಂಗಳ ಒಳಗೆ ಪೂರ್ಣಗೊಳಿಸಲು ನಿರ್ಧರಿಸಿದ್ದು, ಮೇ5 ರ ಒಳಗಾಗಿ ವರ್ಗಾವಣೆ ಕಾರ್ಯವನ್ನು ಮುಗಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>ಒಟ್ಟಾರೆ
ಸರಕಾರಿ ನೌಕರರ ಪೈಕಿ ಶೇ.5 ರಷ್ಟನ್ನು ಮೀರದಂತೆ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದ್ದು, ಬಿಬಿಎಂಪಿ ಚುನಾವಣ ನೀತಿ ಸಂಹಿತೆ ಪೂರ್ಣಗೊಳ್ಳುವ ದಿನದಂದ ಅಂದರೆ ಏಪ್ರಿಲ್ 6 ರಂದು ಚಾಲನೆ ದೊರೆಯಲಿದೆ ಎನ್ನಲಾಗಿದೆ. ಶಾಸಕರು ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ವರ್ಗಾವಣೆಗಳಿಗೆ ಒತ್ತಡ ತರುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರ ಅಭಿಪ್ರಾಯಗಳಿನುಸಾರವಾಗಿ ಸರಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.











Click it and Unblock the Notifications