ತಾರಾ ಕೈಲಿ ಶ್ರೀ ಶ್ರೀ ರವಿಶಂಕರ್ ಜೀವನ ಚರಿತ್ರೆ
ಬೆಂಗಳೂರು,
ಮಾ.29: ಫ್ರೆಂಚ್ ಪತ್ರಕರ್ತೆ ಹಾಗೂ ಲೇಖಕಿ ಫ್ರೆಡ್ರಿಕ್ ಲೆಬೆಲ್ಲೆ ಅವರು ರಚಿಸಿರುವ ಆರ್ಟ್ ಆಫ್ ಲಿವಿಂಗ್ ಖ್ಯಾತಿಯ ರವಿಶಂಕರ್ ಗುರೂಜಿ ಅವರ ಜೀವನ ಚರಿತ್ರೆ 'ವಾಕಿಂಗ್ ದ ಪಾಥ್ 'ಪುಸ್ತಕವನ್ನು ಇಂದಿರಾನಗರದ ದಿ ಒಡಿಸ್ಸಿ ಮಳಿಗೆಯಲ್ಲಿ ಚಲನಚಿತ್ರ ನಟಿ ತಾರಾ ಲೋಕಾರ್ಪಣೆ ಮಾಡಿದರು. id="toptextpromo"> ಸುದರ್ಶನ ಕ್ರಿಯಾ ಮುಂತಾದ ಧ್ಯಾನ, ಯೋಗ ಪದ್ಧತಿಯ ಅಭಿವೃದ್ಧಿ ಪಡಿಸಿ ಜೀವನಕಲೆ ಕಲಿಸಿದ ರವಿಶಂಕರ್ ಗುರೂಜಿ ಅವರ ಆಶ್ರಮದ ಒಡನಾಟ ಹಾಗೂ 1995 ರಿಂದ ಆಧ್ಯಾತ್ಯದ ವಿಚಾರದಲ್ಲಿ ಗುರೂಜಿ ಜೊತೆ ನಡೆಸಿದ ಚಿಂತನ ಮಂಥನದ ಪೂರ್ಣ ಪರಿಪಾಠವನ್ನು ಈ ಜೀವನ ಚರಿತ್ರೆಯ ಹೊತ್ತಿಗೆಯನ್ನು ಲೆಬೆಲ್ಲೆ ತುಂಬಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಸಂದರ್ಭದಲ್ಲಿ ಮಾತನಾಡಿದ ಒಡಿಸ್ಸಿ ಮಳಿಗೆಯ ಮುಖ್ಯಸ್ಥ ಆರ್ ಕೃಷ್ಣಕುಮಾರ್, " ಆಧ್ಯಾತ್ಮಿಕ ವಿಚಾರಗಳನ್ನು ಭಾರತದ ಸಮಾಜ ಇನ್ನೂ ಮುಕ್ತವಾಗಿ ಸ್ವೀಕರಿಸಿಲ್ಲ. ಫ್ರೆಡ್ರಿಕ್ ಲೆಬೆಲ್ಲೆ ಅವರ ' ವಾಕಿಂಗ್ ದ ಪಾಥ್' ಎಲ್ಲರ ಮೆಚ್ಚುಗೆ ಪಡೆಯುವ ಪುಸ್ತಕವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸವಿದೆ ಎಂದರು.











Click it and Unblock the Notifications