ಮಾಸ್ಕೋ ಭಯೋತ್ಪಾದನೆ : 50 ಸಾವು

ವಿಡಿಯೋ:ಮಾಸ್ಕೋದಲ್ಲಿ ಭೀಕರ ಬಾಂಬ್ ಸ್ಫೋಟ
ಸೋಮವಾರ ಬೆಳಿಗ್ಗೆ ಮಾಸ್ಕೋದ ಲುಬಿಯಾಂಕಾ ರೈಲ್ವೆ ಸ್ಟೇಶನ್‌ನಲ್ಲಿ ಸಂಭವಿಸಿದ ಮೊದಲ ಸ್ಫೋಟದಲ್ಲಿ 20 ಮಂದಿ ರೈಲಿನಲ್ಲಿದ್ದವರು ಸಾವನ್ನಪ್ಪಿದ್ದು, ಪ್ಲ್ಯಾಟ್‌ಫಾರಂನಲ್ಲಿ ನಿಂತಿದ್ದ 15ಮಂದಿ ಕೂಡ ಬಲಿಯಾಗಿರುವುದಾಗಿ ಎಮರ್ಜೆನ್ಸಿ ಸಚಿವಾಲಯ ತಿಳಿಸಿದೆ. ಸುಮಾರು 45ನಿಮಿಷಗಳ ನಂತರದ ಪಾರ್ಕ್ ಕುಲ್‌ಟ್ರೈ ಸ್ಟೇಷನ್‌ನಲ್ಲಿ ಎರಡನೇ ಸ್ಫೋಟಕ್ಕೆ 15ಮಂದಿ ಸಾವನ್ನಪ್ಪಿರುವುದಾಗಿ ಸ್ಟೇಟ್ ನ್ಯೂಸ್ ಏಜೆನ್ಸಿಯಾದ ಐಟಿಎರ್-ಟಾಸ್ ಹಾಗೂ ಆರ್ಐಎ ನೋವಿಸ್ಟಿ ವರದಿ ಹೇಳಿದೆ.
ಎರಡು ಪ್ರತ್ಯೇಕ ಬಾಂಬ್ ಸ್ಫೋಟ ಸಂಭವಿಸಿದ ನಂತರ ಇದು ಭಯೋತ್ಪಾದನಾ ಘಟನೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.












Click it and Unblock the Notifications