ವಿಮಾನದಲ್ಲಿ ಬಾಂಬ್ ಇಟ್ಟ ವ ಸಿಐಎಎಫ್ ನೌಕರ!
ತಿರುವನಂತಪುರಂ,
ಮಾ. 29: ಬೆಂಗಳೂರಿನಿಂದ ತಿರುವನಂತಪುರಕ್ಕೆ ತೆರಳಿದ ಕಿಂಗ್ ಫಿಶರ್ ವಿಮಾನದಲ್ಲಿ ಸ್ಫೋಟಕ ವಸ್ತುಗಳನ್ನು ಇಟ್ಟಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಸಿಐಎಎಫ್ ನ ಮಾಜಿ ಗುತ್ತಿಗೆ ನೌಕರ ಎಂದು ಗುರುತಿಸಲಾಗಿದೆ. id="toptextpromo">ಕೇಂದ್ರ
ಕೈಗಾರಿಕಾ ಭದ್ರತಾ ಪಡೆ ಮಾಜಿ ಸಿಬ್ಬಂದಿಯಾಗಿದ್ದ ರಾಜಶೇಖರ್ ನಾಯರ್ (49) ಈ ಕೃತ್ಯ ಎಸೆಗಿದ ಪ್ರಮುಖ ಆರೋಪಿಯಾಗಿದ್ದಾನೆ. ನಾಯರ್ ಸಿಐಎಎಫ್ ನಲ್ಲಿ 20 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಂತರ ಸ್ವಯಂ ನಿವೃತ್ತಿ ಪಡೆದಿದ್ದಾನೆ. ಈಗ ಖಾಸಗಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಯರ್ ವಿಚಾರಣ್ ನಡೆಯುತ್ತಿದ್ದು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ ಎಂದು ಕೇರಳ ಪೊಲೀಸ್ ಇಲಾಖೆ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಮಾ.21
ರ ಭಾನುವಾರದಂದು ಸ್ಫೋಟಕಗಳನ್ನು ಹೊಂದಿದ್ದ ಕ್ರಿಕೆಟ್ ಬಾಲ್ ಮಾದರಿಯ ವಸ್ತುವೊಂದು ಕಿಂಗ್ ಫಿಶರ್ IT-4731 ವಿಮಾನದ ಕಾರ್ಗೋ(ಸರಕು ಸಾಗಣೆ) ವಿಭಾಗದಲ್ಲಿ ಪತ್ತೆಯಾಗಿತ್ತು.ಸುಮಾರು 27 ಜನ ಈ ವಿಮಾನದಲ್ಲಿ ಪ್ರಯಾಣಿಸಿದ್ದರು. ಆದರೆ, ಯಾವುದೇ ಹಾನಿ ಸಂಭವಿಸುವ ಮುನ್ನ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿತ್ತು.











Click it and Unblock the Notifications