ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಧಾರವಾಡದಲ್ಲಿ ಹೀರೋಹೊಂಡಾ ಘಟಕ
ಉತ್ಪಾದನಾ ಘಟಕ ಆರಂಭಕ್ಕೆ ಸಂಬಂಧಿಸಿದಂತೆ ಕಂಪನಿ ತಾತ್ವಿಕ ಒಪ್ಪಿಗೆ ನೀಡಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ ನಿವೇಶನ ಮಂಜೂರು ಮಾಡಿದ್ದೇವೆ. ಬಿಬಿಎಂಪಿ ಚುನಾವಣೆ ಕಾರಣದಿಂದ ಅಂತಿಮ ಸುತ್ತಿನ ಮಾತುಕತೆ ವಿಳಂಬವಾಗಿದ್ದು, ಶೀಘ್ರದಲ್ಲಿ ಕಂಪನಿಯಿಂದ ಘಟಕಕ್ಕೆ ಅಧಿಕೃತ ಅನುಮೋದನೆ ದೊರೆಯಲಿದೆ. ಮುಂದಿನ 18ತಿಂಗಳೊಳಗೆ ಘಟಕದ ಕಾಮಗಾರಿ ಆರಂಭವಾಗಲಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಆರಂಭದಲ್ಲಿ ಕಂಪನಿ 2,000 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಿದ್ದು, ವಾರ್ಷಿಕ 1 ಲಕ್ಷ ವಾಹನ ಸಾಮರ್ಥ್ಯ ಹೊಂದಿರುವ ಘಟಕಕ್ಕೆ ಸುಮಾರು 800-1000 ಉದ್ಯೋಗಿಗಳನ್ನು ಕಂಪನಿ ನೇಮಕ ಮಾಡಿಕೊಳ್ಳಲಿದೆ ಎಂದು ಅವರು ವಿವರಿಸಿದರು.
Comments
ಧಾರವಾಡ ಮುರುಗೇಶ್ ನಿರಾಣಿ ಕೈಗಾರಿಕೆ ಆಟೋಮೊಬೈಲ್ಸ್ hero honda dharwad murugesh nirani industries automobiles
Story first published: Monday, March 29, 2010, 15:04 [IST]