ಗ್ರಾಪಂ ಚುನಾವಣೆ ಮುಂದೂಡಲ್ಲ: ಸಿಎಂ

ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಮುಖ ಹಂತವಾಗಿರುವ ಗ್ರಾಮ ಪಂಚಾಯಿತಿಗಳ ಆಡಳಿತ ಆಡಳಿತಾಧಿಕಾರಿಗಳ ಕೈಯಲ್ಲಿ ಬಹಳ ದಿನ ಇರಬಾರದು ಎನ್ನುವುದು ಸರಕಾರದ ಕಾಳಜಿಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳು ನಿಗದಿತ ಸಮಯದಲ್ಲೇ ನಡೆಯಲಿವೆ ಎಂದರು. ಬಜೆಟ್ ನಲ್ಲಿ ಅನುಮೋದಿಸಿದ ಕಾರ್ಯಕ್ರಮಗಳನ್ನು ಜಾರಿಗೆ ತರಲು ಅನುಕೂಲವಾಗುವಂತೆ ಶೀಘ್ರ ಆದೇಶ ಹೊರಡಿಸಿಲು ಏಪ್ರಿಲ್ 5 ರಂದು ಎಲ್ಲ ಸಚಿವರು ಹಾಗೂ ಇಲಾಖೆಗಳ ಕಾರ್ಯದರ್ಶಿಗಳ ಸಭೆ ಕರೆಯಲಾಗುವುದು ಎಂದು ಯಡಿಯೂರಪ್ಪ ವಿವರಿಸಿದರು.











Click it and Unblock the Notifications