ಮೊಬೈಲ್‌ನಲ್ಲಿ ಅಣುಕು ಸಿಇಟಿ ಪರೀಕ್ಷೆ

BASE, Ipomo launch mobile phone-based testing platform
ಬೆಂಗಳೂರು, ಮಾ.27:ಮೊಬೈಲ್ ಸದ್ಯದಲ್ಲೇ ಪರೀಕ್ಷೆ ಸಾಧನವಾಗಲಿದೆ. ಬೆಂಗಳೂರು ಮೂಲದ ಐಪೊಮೊ ಕಂಪನಿ ಮೊಬೈಲ್ ಮೂಲಕ ಸಿಇಟಿ ಪರೀಕ್ಷೆ ಬರೆಯುವ ತಂತ್ರಜ್ಞಾನ ಕಂಡು ಹಿಡಿದಿದೆ. ಐಪೊಮೊ ಈಗಾಗಲೇ ಇದಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಏ. 4 ರಿಂದ 23 ರವರೆಗೆ 'ಮೊಬೈಲ್‌ನಲ್ಲಿ ಅಣಕು ಸಿಇಟಿ' ನಡೆಸಲಿದೆ.

ಪರೀಕ್ಷೆ 8 ನಗರಗಳ 10 ಕೇಂದ್ರಗಳಲ್ಲಿ ನಡೆಯಲಿದೆ. ಪ್ರತಿ ಕೇಂದ್ರದಲ್ಲಿ 400 ಮಂದಿ ಪರೀಕ್ಷೆ ಬರೆಯಬಹುದಾಗಿದೆ. ಪರೀಕ್ಷೆಯಲ್ಲಿ ಭಾಗವಹಿಸಲು ಬಯಸುವವರು ಉಚಿತವಾಗಿ ಹೆಸರು ನೋಂದಾಯಿಸಬಹುದು. ಅವರಿಗೆ ವಿಶೇಷ ತಂತ್ರಜ್ಞಾನವುಳ್ಳ ಮೊಬೈಲ್ ಕೊಡಲಾಗುತ್ತದೆ. ನಗರ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ನಡುವಿನ ಮಾಹಿತಿ ತಂತ್ರಜ್ಞಾನದ ಅಸಮಾನತೆ ನಿವಾರಿಸಲು ಈ ಯೋಜನೆ ರೂಪಿಸಲಾಗಿದೆ.

ಯೋಜನೆಗೆ ನೋಕಿಯಾ, ಬೇಸ್, ವಿದ್ಯಾಪೋಷಕ್ ಸಂಸ್ಥೆಗಳು ಸಹಕಾರ ನೀಡುತ್ತಿವೆ. ಇದರಿಂದ ಸಿಇಟಿ ಪ್ರಕ್ರಿಯೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಲಿದೆ ಎಂದು ಐಪೊಮೊ ಸಂಸ್ಥೆಯ ವಿದ್ಯಾಧರ ಎಸ್. ತಳ್ಯ ತಿಳಿಸಿದ್ದಾರೆ. ನಗರದ ಬಿಎಎಸ್‌ಇ (Bangalore Association for Science Education (BASE) ಸಂಸ್ಥೆ ಪ್ರಶ್ನೆ ಪತ್ರಿಕೆ ಸಿದ್ಧ ಪಡಿಸಲಿದೆ. ಪ್ರತಿ ಪ್ರಶ್ನೆ ಪತ್ರಿಕೆಯಲ್ಲಿ 60 ಪ್ರಶ್ನೆಗಳಿರಲಿದ್ದು, 60 ನಿಮಿಷದಲ್ಲಿ ಉತ್ತರಿಸಬೇಕು. ಅಭ್ಯರ್ಥಿಗಳಿಗೆ ಗುರುತಿನ ಪತ್ರ ಕೊಡಲಾಗುತ್ತದೆ ಎಂದು ಹೇಳಿದ್ದಾರೆ.

ನೋಂದಾಯಿಸಲು ಹೀಗೆ ಮಾಡಿ:
SMS "MOCKCET CENTRE CODE YOUR NAME" to 9535096419.
For example to enroll for Bijapur,
SMS "MOCKCET 001 Vinay Kotur" to 9535096419.

ಸಂಪರ್ಕ : 9663690244/ 9886341879
ವೆಬ್‌ಸೈಟ್ : www.ipomo.in

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+