ವಿವಾಹಪೂರ್ವ ಲೈಂಗಿಕತೆ ತಪ್ಪಲ್ಲ: ಸುಪ್ರೀಂ ಕೋರ್ಟ್
ನವದೆಹಲಿ,
ಮಾ.24 : ವಿವಾಹಪೂರ್ವ ಲೈಂಗಿಕ ಸಂಬಂಧ ಹಾಗೂ ಕೂಡಿ ಬಾಳುವಿಕೆ ತಪ್ಪಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತ ಪಡಿಸಿದೆ. ಚಿತ್ರನಟಿ ಖುಷ್ಬೂ ವಿವಾಹಪೂರ್ವ ಸಂಬಂಧ ಪರ ದನಿ ಎತ್ತಿದ್ದರಿಂದ ತಮ್ಮ ವಿರುದ್ಧ ದಾಖಲಾಗಿಸಿರುವ ಅಪರಾಧ ಪ್ರಕರಣಗಳನ್ನು ವಜಾಗೊಳಿಸಲು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈರೀತಿ ಅಭಿಪ್ರಾಯಪಟ್ಟಿದೆ. id="toptextpromo">ಇಬ್ಬರು
ಪ್ರಾಪ್ತ ವಯಸ್ಕರು ಮದುವೆಯಾಗದೆ ಜೊತೆಗೆ ಇರ ಬಯಸಿದರೆ ಅದು ಅಪರಾಧವಲ್ಲ. ಪುರಾಣಗಳ ಪ್ರಕಾರ ಕೃಷ್ಣ ಮತ್ತು ರಾಧಾ ಕೂಡ ಒಟ್ಟಿಗೆ ಬಾಳ್ವೆ ನಡೆಸುತ್ತಿದ್ದರು. ಇದರಲ್ಲಿ ಯಾವುದೇ ಅಪರಾಧವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್, ದೀಪಕ್ ವರ್ಮಾ, ಬಿ ಎಸ್ ಚೌಹಾಣ್ ಅವರನ್ನೊಳಗೊಂಡ ಪೀಠ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಜೊತೆಗೆ
ಇರುವಿಕೆ ಅಥವಾ ವಿವಾಹಪೂರ್ವ ಲೈಂಗಿಕತೆಯನ್ನು ನಿರ್ಬಂಧಿಸುವ ಕಾನೂನು ಯಾವುದೂ ಇಲ್ಲ. ಈ ಸಂಬಂಧ ಪೀಠ ತನ್ನ ಅಂತಿಮ ತೀರ್ಪನ್ನು ಕಾಯ್ದಿರಿಸಿದೆ. ವಿವಾಹ ಪೂರ್ವ ಲೈಂಗಿಕತೆ ತಪ್ಪಲ್ಲ ಎಂದು ತಮಿಳು ಪತ್ರಿಕೆಗೆ ಖುಷ್ಬು ನೀಡಿದ್ದ ಸಂದರ್ಶನ ತೀವ್ರ ವಿವಾದಕ್ಕೆ ಕಾರಣವಾಗಿತ್ತು.











Click it and Unblock the Notifications