ಕೊಲ್ಕತ್ತಾ : ಬೆಂಕಿ ಆಕಸ್ಮಿಕಕ್ಕೆ 2 ಸಾವು

Kolkata park street fire
ಕೊಲ್ಕತ್ತಾ, ಮಾ. 23 : ನಗರದ ಪಾರ್ಕ್ ಸ್ಟ್ರೀಟ್ ನಲ್ಲಿರುವ ಬಹುಮಹಡಿ ವಾಣಿಜ್ಯ ಮಳಿಗೆಯೊಂದಕ್ಕೆ ಆಕಸ್ಮಿಕ ಬೆಂಕಿ ದುರಂತ ಸಂಭವಿಸಿ ಇಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಕಟ್ಟಡದಲ್ಲಿ ನೂರಾರು ಜನರು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. 15 ಅಗ್ನಿಶಾಮಕ ದಳಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ ಮೂಲಗಳು ತಿಳಿಸಿವೆ.

ಕಟ್ಟಡದ ಎಲಿವೇಟರ್ ನಲ್ಲಿ ಕಾಣಿಸಿಕೊಂಡ ಬೆಂಕಿ ಸಂಪೂರ್ಣ ಕಟ್ಟಡಕ್ಕೆ ಆವರಿಸಿಕೊಂಡಿತು. ಈ ಕಟ್ಟಡ ತುಂಬ ಹಳೆಯದಾಗಿದ್ದು, ಬ್ರಿಟಿಷ್ ಕಾಲದ ಕಟ್ಟಡವಾಗಿದೆ. ಬೆಂಕಿ ಕಟ್ಟಡವನ್ನು ಸಂಪೂರ್ಣವಾಗಿ ಆವರಿಸಿದ್ದು, ಸುಮಾರು 500 ಮಂದಿ ಕಟ್ಟಡದಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಪಾರ್ಕ್ ಸ್ಟ್ರೀಟ್ ನಗರದ ಜನನಿಬಿಡ ಪ್ರದೇಶವಾಗಿದ್ದು, ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಜನರು ಭಯಭೀತರಾಗಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+