ಹೆಂಡತಿಯನ್ನೇ ಮಾರಿದ ಆಧುನಿಕ ಸತ್ಯಹರಿಶ್ಚಂದ್ರ

ತನ್ನ ಹೆಂಡತಿಯನ್ನು ಮಾರಿದ ಭೂಪನ ಹೆಸರು ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿರುವ ಇರ್ಫಾನ್ ಮಿಯಾನ್. ಈತ 22 ಹರೆಯದ ತನ್ನ ಹೆಂಡತಿ ರೆಹಾನಾಳನ್ನು ಮುಂಬೈನ ಮನೆಯೊಂದರಲ್ಲಿ ಕೆಲಸಕ್ಕೆ ನಿಯೋಜಿಸಿದ್ದ. ಬಳಿಕೆ ಆಕೆಗೆ ಗೊತ್ತಾಗದಂತೆ ಆಕೆಯನ್ನು ಮಾರಿ ರು.40, 000 ತೆಗೆದುಕೊಂಡು ಪರಾರಿಯಾಗಿದ್ದ.
ಹೋಗುವುದಕ್ಕೂ ಮುನ್ನ ತನ್ನ ಹೆಂಡತಿಗೆ ಆದಷ್ಟು ಬೇಗ ಹಿಂತಿರುಗಿ ಆಕೆಯನ್ನು ಕರೆದೊಯ್ಯುವುದಾಗಿ ಇರ್ಫಾನ್ ನಂಬಿಸಿದ್ದ. ಬಳಿಕ ಕೆಲಸ ಮಾಡುತ್ತಿದ್ದ ಮನೆಯವರು ಆಕೆಗೆ ನಿಜ ಸಂಗತಿ ತಿಳಿಸಿದ್ದಾರೆ. ಗಾಬರಿಗೊಂಡ ಆಕೆ ಕಡೆಗೆ ಹೇಗೋ ಸಾವರಿಸಿಕೊಂಡು ದಿನನೂಕಿದ್ದಾರೆ. ಬಳಿಕ ಯಾರಿಗೂ ಅನುಮಾನ ಬರದ ರೀತಿಯಲ್ಲಿ ಹೆತ್ತವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.
ರೆಹಾನಾಳ ಹೆತ್ತವರು ರು.40,000 ಕೊಟ್ಟು ಆಕೆಯನ್ನು ಬಿಡಿಸಿಕೊಂಡು ಬಂದಿದ್ದು ಇರ್ಫಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ಎಫ್ ಐಆರ್ ನಲ್ಲಿ ರೆಹಾನಾಳ ಗಂಡ ಮತ್ತು ಕುಟುಂಬದವರ ಕೃತ್ಯವಿದೆಂದು ಹೇಳಲಾಗಿದೆ ಎಂದು ಡಿಎಸ್ ಪಿ ಡಿಪಿ ಸಿಂಗ್ ತಿಳಿಸಿದ್ದಾರೆ.











Click it and Unblock the Notifications