ಅಮರ್ ಸಿಂಗ್ ರಿಂದ ಸಮಾಜಮುಖಿ ಪಕ್ಷ?

ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಮಾಜವಾದಿ ಪಕ್ಷದಿಂದ ಜಯಪ್ರದಾ ಹಾಗೂ ಅಮರ್ ಸಿಂಗ್ ಉಚ್ಚಾಟನೆಗೊಂಡಿದ್ದರು. ಆನಂತರ, ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಯಾವುದೇ ಸುಳಿವು ಕೊಟ್ಟ್ಟಿರಲಿಲ್ಲ. ಆದರೆ, ಮಾರ್ಚ್28 ರ ಮಹಾಸಭಾ ಕಾರ್ಯಕ್ರಮದ ನಂತರ ಹೊಸ ಪಕ್ಷ ಘೋಷಿಸುತ್ತೇನೆ ಎಂದು ಅಮರ್ ಹೇಳಿಕೊಂಡಿದ್ದಾರೆ. ತಮ್ಮ ಸಹ ರಾಜಕಾರಣಿಗಳು, ಸಮಾಜಮುಖಿ ಯುವಕರನ್ನು ಒಗ್ಗೂಡಿಸಿ, ಹೊಸ ಪ್ರೀತಿ ತತ್ತ್ವದ ಮೇಲೆ ಪಕ್ಷ ರೂಪಿಸುವುದಾಗಿ ಅಮರ್ ಹೇಳಿದರು.












Click it and Unblock the Notifications