ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

488 ಮಹಿಳೆಯರ ಮೇಲೆ ಅತ್ಯಾಚಾರ

By Mrutyunjaya Kalmat
|
Google Oneindia Kannada News

VS Acharya
ಬೆಂಗಳೂರು, ಮಾ. 14 : ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 488 ಅತ್ಯಾಚಾರ ಹಾಗೂ 584 ಮಹಿಳೆಯರ ಕೊಲೆ ನಡೆದಿದೆ. ಕಳೆದ ಎರಡು ವರ್ಷದಲ್ಲಿ 5060 ಮಹಿಳೆಯರು ಕಾಣೆಯಾಗಿದ್ದಾರೆ ಎಂದು ವಿಧಾನ ಪರಿಷತ್ ನಲ್ಲಿ ಗೃಹಸಚಿವ ವಿ ಎಸ್ ಆಚಾರ್ಯ ಹೇಳಿದರು.

2008ರಲ್ಲಿ 2493, 2009ರಲ್ಲಿ 2567 ಮಹಿಳೆಯರು ಕಾಣೆಯಾಗಿದ್ದಾರೆ. ಕಾಣೆಯಾಗಿದ್ದ ಮಹಿಳೆಯರಲ್ಲಿ 2008 ಮತ್ತು 2009ರಲ್ಲಿ ಕ್ರಮವಾಗಿ 2172 ಮತ್ತು 2011 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಕಳೆದ ಸುಮಾರು 20 ತಿಂಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ 454 ಕೊಲೆ ಪ್ರಕರಣಗಳು ನಡೆದಿವೆ. ಇದರಲ್ಲಿ 396 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ವಿವರಿಸಿದರು.

21 ದೇವಸ್ಥಾನ, 25 ಮಸೀದಿ ಮತ್ತು 52 ಚರ್ಚುಗಳು ಸೇರಿದಂತೆ ಕಳೆದ ಮೂರು ವರ್ಷಗಳಲ್ಲಿ 98 ಧಾರ್ಮಿಕ ಕೇಂದ್ರಗಳಿಗೆ ದಾಳಿ ನಡೆದಿದೆ. 2007ರಲ್ಲಿ ನಾಲ್ಕು ದೇವಾಲಯ, ಐದು ಮಸೀದಿ, ಆರು ಚರ್ಚ್, 2008ರಲ್ಲಿ ಏಳು ದೇವಾಲಯ, ಏಳು ಮಸೀದಿ, 38 ಚರ್ಚ್, 2009ರಲ್ಲಿ ಏಳು ದೇವಾಲಯ, 11 ಮಸೀದಿ, ಎಂಟು ಚರ್ಚ್, 2010ರಲ್ಲಿ ಎಂಟು ದೇವಾಲಯ, ಐದು ಮಸೀದಿ ಹಾಗೂ ಆರು ಚರ್ಚುಗಳ ಮೇಲೆ ದಾಳಿ ನಡೆದಿದೆ ಎಂದರು.

ದೇವಾಲಯ, ಚರ್ಚ್, ಮಸೀದಿ ದಾಳಿ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 105 ಪ್ರಕರಣಗಳು ದಾಖಲಾಗಿವೆ. 461 ಆರೋಪಿಗಳನ್ನು ಬಂಧಿಸಲಾಗಿದೆ. ಕರ್ನಾಟಕ ಮಾನವ ಹಕ್ಕುಗಳ ಆಯೋಗದಲ್ಲಿ 72 ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ಧಾರ್ಮಿಕ ಕೇಂದ್ರಗಳ ಮೇಲೆ ನಡೆದಿರುವ ದಾಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೇ ಅಗ್ರ ಸ್ಥಾನ ಪಡೆದುಕೊಂಡಿದೆ. ಇಲ್ಲಿ 2008ರಲ್ಲಿ 16 ಚರ್ಚ್ ಹಾಗೂ 2009ರಲ್ಲಿ ಐದು ಮಸೀದಿಗಳ ಮೇಲೆ ದಾಳಿ ನಡೆದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X