ನೀರು ಪೋಲು; ಬೆಂಗಳೂರಿಗೆ ದ್ವಿತೀಯ ಸ್ಥಾನ
ಬೆಂಗಳೂರು,
ಮಾ.13: ನೀರನ್ನು ಅನಾವಶ್ಯಕವಾಗಿ ಪೋಲು ಮಾಡಬೇಡಿ. ನೀರು ಅಮೂಲ್ಯವಾದ ವಸ್ತು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ ಆಗಾಗ ಬೆಂಗಳೂರು ನಾಗರೀಕರನ್ನು ಎಚ್ಚರಿಸುತ್ತಲೆ ಇರುತ್ತದೆ. ಇಷ್ಟೆಲ್ಲಾ ಎಚ್ಚರಿಕೆಗಳನ್ನು ಪಾಲಿಸಿದರೂ ಕುಡಿಯುವ ನೀರು ಪೋಲು ಮಾಡುವ ವಿಚಾರದಲ್ಲಿ ನಮ್ಮ 'ಸಿಲಿಕಾನ್ ಸಿಟಿ' ಬೆಂಗಳೂರಿಗೆ ಎರಡನೇ ಸ್ಥಾನ ಸಿಕ್ಕಿದೆ. id="toptextpromo">ಕೇಂದ್ರ
ನಗರಾಭಿವೃದ್ಧಿ ಸಚಿವಾಲಯ ದೇಶದ 28 ನಗರಗಳಲ್ಲಿ ನಗರ ನೈರ್ಮಲ್ಯ ಮತ್ತು ನೀರು ಪೂರೈಕೆ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಪೂರೈಸುತ್ತಿರುವ ಕುಡಿಯುವ ನೀರು ಶೇ.50.9ರಷ್ಟು ವ್ಯರ್ಥವಾಗುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ. ನೀರು ಪೋಲಿನ ವಿಚಾರದಲ್ಲಿ ದೆಹಲಿ, ಬೆಂಗಳೂರು ನಂತರದ ಸ್ಥಾನದಲ್ಲಿ ಮುಂಬೈ, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್ ಮತ್ತು ಅಹಮದಾಬಾದ್ ನಗರಗಳಿವೆ. id='are-slot-1' class='oiad oi-axt oiadv'> id='top-searched-articles'>ಬೆಂಗಳೂರಿನ
ಶೇ.50.8ರಷ್ಟು ಮಂದಿಗೆ ಮಾತ್ರ ಕೊಳವೆ ಮಾರ್ಗದ ಮೂಲಕ ನೀರನ್ನು ಪೂರೈಸಲಾಗುತ್ತಿದೆ. ಉಳಿದವರು ತೆರೆದ ಬಾವಿ ಮತ್ತು ಕೊಳವೆ ಬಾವಿಗಳ ಮೂಲಕ ನೀರನ್ನು ಪಡೆಯುತ್ತಿದ್ದಾರೆ ಎಂದು ಅಧ್ಯಯನದಲ್ಲಿ ಹೇಳಿದೆ. ಕುಡಿಯುವ ನೀರು ಪೋಲು ಮಾಡುವ ವಿಚಾರದಲ್ಲಿ ಮೊದಲ ಸ್ಥಾನವನ್ನು ದೆಹಲಿ ಪಡೆದುಕೊಂಡಿದೆ.











Click it and Unblock the Notifications