ನಿತ್ಯಾನಂದನ ಮಲೇಷಿಯಾ ಶಾಖೆ ನಿಷ್ಕ್ರಿಯ

ಸ್ಥಳೀಯ ಮಾಧ್ಯಮಗಳಲ್ಲಿ ಸ್ವಾಮಿ ನಿತ್ಯಾನಂದ ಕುರಿತ ವರದಿ ಪ್ರಸಾರವಾದ ಮೇಲೆ, ಭಕ್ತರು ಆಶ್ರಮಕ್ಕೆ ಕರೆ ಮಾಡಿ ವಿಚಾರಿಸಲು ಆರಂಭಿಸಿದರು. ನಂತರ ಇಲ್ಲಿನ ಹಿಂದೂ ಸಂಘಟನೆಯ ಸಲಹೆ ಮೇರೆಗೆ ಆಶ್ರಮದ ಚಟುವಟಿಕೆಗಳನ್ನು ನಿಲ್ಲಿಸಲಾಯಿತು. ನಿತ್ಯಾನಂದರ ಪ್ರವಚನಗಳ ಪ್ರಚಾರಕ್ಕಾಗಿ ಆಶ್ರಮವನ್ನು ಎರಡು ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು.
ಮಲೇಷಿಯಾದಲ್ಲಿರುವ ನಿತ್ಯಾನಂದರ ಭಕ್ತರ ಸಂಖ್ಯೆ ಸರಿಯಾಗಿ ಲಭ್ಯವಿಲ್ಲವಾದರೂ, ಸ್ಪರ್ಶ ಚಿಕಿತ್ಸೆ, ಯೋಗ ಹಾಗೂ ಪೂಜಾ ವಿಧಾನ ಕಲಿಕೆಗೆಂದು ಸುಮಾರು 400 ಜನರು ಸೇರುತ್ತಿದ್ದರು ಎನ್ನಲಾಗಿದೆ. ತಮಿಳು ಮೂಲದ ಭಕ್ತರೇ ಮಲೇಷಿಯಾದಲ್ಲಿ ಹೆಚ್ಚು. ಇಲ್ಲೂ ಕೂಡ ನಟಿ ರಂಜಿತಾ ಜೊತೆಗಿನ ಸ್ವಾಮಿ ನಿತ್ಯಾನಂದ ವಿಡಿಯೋ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದಿದೆ.
ಮಲೇಷಿಯಾ ನಿತ್ಯಾ ಧ್ಯಾನಪೀಠ ಆಶ್ರಮದ ವೆಬ್ ವಿಳಾಸ: http://www.mynithyananda.com












Click it and Unblock the Notifications