ಟೀ ಮಾರಿದ ಮಹಿಳೆಯೀಗ ಮೇಯರ್
ಗುಲ್ಬರ್ಗಾ,
ಮಾ. 9 : ಕಳೆದ ದಶಕಗಳಿಂದ ಕಾಂಗ್ರೆಸ್ ಕಪಿಮುಷ್ಠಿಯಲ್ಲಿದ್ದ ಗುಲ್ಬರ್ಗಾ ಮಹಾನಗರ ಪಾಲಿಕೆ ಇದೀಗ ಬಿಜೆಪಿ ಕೈವಶವಾಗಿದೆ. ಮೇಯರ್ ಆಗಿ ಆಯ್ಕೆಯಾದವರು ಚಹಾ ಮಹಿಳೆ ಎನ್ನುವುದು ವಿಶೇಷವಾಗಿದೆ. id="toptextpromo">ಸುನಂದಾ
ನಗರದ ಮೋಹನ್ ಲಾಡ್ಜ್ ಬಳಿ ಚಹಾ ಅಂಗಡಿ ಇಟ್ಟುಕೊಂಡಿದ್ದರು. ಪತಿ ರಾಜಾರಾಮ್ ಕೂಡಾ ಸುನಂದಾ ಅವರ ಚಹಾ ವ್ಯಾಪಾರದಲ್ಲಿ ಸಹಕರಿಸುತ್ತಾರೆ. ಮೂಲತಃ ಸೊಲ್ಲಾಪುರದವರಾದ ಸುನಂದಾ, 14 ವರ್ಷದ ಹಿಂದೆ ರಾಜಾರಾಮ್ ಅವರನ್ನು ಮದುವೆಯಾಗಿ ಗುಲ್ಬರ್ಗಾದ ಇಂದಿರಾ ನಗರದಲ್ಲಿ ವಾಸವಾಗಿದ್ದಾರೆ. ಪಾಲಿಕೆ ಸದಸ್ಯರಾದ ನಂತರ ಸುನಂದಾ ಚಹಾ ಮಾರುವುದನ್ನು ಬಿಟ್ಟಿದ್ದು, ಪತಿ ರಾಜಾರಾಮ್ ಆ ವೃತ್ತಿಯನ್ನು ಮುಂದುವರೆಸಿದ್ದಾರೆ. ಎಸ್ಎಸ್ಎಲ್ ಸಿ ಓದಿಕೊಂಡಿರುವ ಸುನಂದಾ ಬಡತನ ಕುಟುಂಬದಿಂದ ಮೇಲಕ್ಕೆ ಬಂದವರಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಉಪಮೇಯರ್
ಆಗಿ ಆಯ್ಕೆಯಾಗಿರುವ ಸೈಯದ್ ಸಜ್ಜಾದ್ ಅಲಿ, 20 ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸ್ವಯಂ ನಿವೃತ್ತಿ ನಂತರ ಗುಲ್ಬರ್ಗಾ ಮಹಾನಗರ ಪಾಲಿಕೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.











Click it and Unblock the Notifications